ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಮಲಪ್ರಭಾ ನದಿಯ ಪ್ರವಾಹಕ್ಕೊಳಗಾಗಿದೆ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಊರನ್ನು ತೊರೆದಿದ್ದಾರೆ. ಆದರೆ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿ ಉಳಿಯೋದಕ್ಕೆ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಮಾತ್ರ ಸಂಪೂರ್ಣ ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಈ ಕುರಿತು ಈಟಿವಿ ಭಾರತದಲ್ಲಿ ವರದಿ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್, ಕೂಡಲೇ ಶೆಡ್ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಕಳೆದ ತಿಂಗಳ ಪ್ರವಾಹದ ಸಂದರ್ಭದಲ್ಲಿಯೇ ಗ್ರಾಮಸ್ಥರು ತಾತ್ಕಾಲಿಕ ಶೆಡ್ಗೆ ಬೇಡಿಕೆ ಇಟ್ಟಿದ್ದರು. ಆದರೂ ಸಹ ಜಿಲ್ಲಾಡಳಿತ ಇವರ ಬೇಡಿಕೆ ಈಡೇರಿಸಿರಲಿಲ್ಲ. ಈಗ ಸಹ ಅದೇ ನಿರ್ಲಕ್ಷ್ಯ ತೋರಿದೆ. ಇನ್ನು ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡಿ ಅಂತ ಬೇಡಿಕೆಯಿಟ್ರೂ ಸಹ ಅದಕ್ಕೂ ಸ್ಪಂದನೆ ಮಾಡದ ಜಿಲ್ಲಾಡಳಿತ, ಇಲ್ಲಸಲ್ಲದ ಕಾರಣ ಹೇಳುತ್ತಿದೆ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.