ಗದಗ:ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಂಸದ ರಮೇಶ್ ಜಿಗಜಿಣಗಿ ಭಾಗವಹಿಸಿದರು.
ಸಮ್ಮಿಶ್ರ ಸರ್ಕಾರ ರಾಜ್ಯವನ್ನ ಗಬ್ಬೆಬ್ಬಿಸಿ ಹೋಗಿದೆ.. ಸಂಸದ ರಮೇಶ್ ಜಿಗಜಿಣಗಿ - ಸಂಸದ ರಮೇಶ್ ಜಿಗಜಿಣಗಿ
ಈ ಹಿಂದೆ ಇದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.
![ಸಮ್ಮಿಶ್ರ ಸರ್ಕಾರ ರಾಜ್ಯವನ್ನ ಗಬ್ಬೆಬ್ಬಿಸಿ ಹೋಗಿದೆ.. ಸಂಸದ ರಮೇಶ್ ಜಿಗಜಿಣಗಿ](https://etvbharatimages.akamaized.net/etvbharat/prod-images/768-512-4700135-thumbnail-3x2-gdg.jpg)
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಖಾಲಿ ಆಗಿದೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಬಿಎಸ್ವೈ ಹೇಳಿಕೆ ನೂರಕ್ಕೆ ನೂರು ಸತ್ಯ. ಹಿಂದಿನ ಸರ್ಕಾರದ್ದು ಬೇಬೇಟಿ ಆಡಳಿತ. ಕಿಸೆಯಲ್ಲಿ ಹಣ ಇಲ್ಲ ಅಂದ್ರೂ ಬೆಲ್ಲ ಕೊಟ್ಟವರಂತೆ ಮಾಡಿ ಹೋಗಿದ್ದಾರೆ ಎಂದರು.
ಬೊಕ್ಕಸದಲ್ಲಿ ಒಂದು ರೂಪಾಯಿ ಇಲ್ಲ. ಆದರೆ, ಅವರಿಗೆ ಬೇಕಾದದ್ದು ಮಂಜೂರು ಮಾಡಿದ್ದಾರೆ. ಆದರೆ, ಏನ್ಮಾಡೋದು ಸಿಎಂ ಜೊತೆ ಶಾಸಕರು ಜಗಳ ಆಡ್ತಾರೆ. ಹೀಗೆ ಹಾಳೆ ಮೇಲೆ ಮಂಜೂರು ಮಾಡಿದ್ರೆ ಏನು ಬಂತು. ಹಿಂದಿನ ಸರ್ಕಾರದವರು ಸಂಪೂರ್ಣ ಗಬ್ಬೆಬ್ಬಿಸಿ ಹೋಗಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಗುಡುಗಿದರು.