ಗದಗ:ನಾಳೆಯಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆ ಗದಗ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ಅಂಗಡಿ ಮಾಲೀಕರು ತಯಾರಿ ನಡೆಸುತ್ತಿದ್ದಾರೆ.
ನಾಳೆಯಿಂದ ಮದ್ಯದಂಗಡಿ ತೆರೆಯಲು ಗದಗದಲ್ಲಿ ಭರ್ಜರಿ ತಯಾರಿ - ಮದ್ಯ ಮಾರಾಟಕ್ಕೆ ಅನುಮತಿ
ಕಂಟೇನ್‌ಮೆಂಟ್ ಪ್ರದೇಶವನ್ನು ಹೊರತುಪಡಿಸಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆ ಗದಗ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ಅಂಗಡಿ ಮಾಲೀಕರು ತಯಾರಿ ನಡೆಸುತ್ತಿದ್ದಾರೆ.
ಮದ್ಯದಂಗಡಿ ತೆಗೆಯಲು ಗದಗ ಜಿಲ್ಲೆಯಲ್ಲಿ ತಯಾರಿ
ಜಿಲ್ಲೆಯಲ್ಲಿರುವ 141 ಮದ್ಯದಂಗಡಿಗಳ ಪೈಕಿ 70 ಅಂಗಡಿಗಳು ಮಾತ್ರ ಆರಂಭವಾಗಲಿವೆ. ಒಟ್ಟು 15 ಎಮ್ಎಸ್ಎಲ್ ಶಾಪ್, 55 ವೈನ್ ಶಾಪ್ ಆರಂಭವಾಗಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಖಾಸಗಿ ಹಾಗೂ ಎಂಎಸ್ಐಎಲ್ ಅಂಗಡಿಗಳ ಮುಂದೆ ಬಡಿಗೆಗಳನ್ನು ಕಟ್ಟಲಾಗುತ್ತಿದೆ.
ಇನ್ನು ನಗರದ ರಂಗನವಾಡಿ ಹಾಗೂ ಗಂಜಿ ಬಸವೇಶ್ವರ ನಗರ ಕಂಟೇನ್‌ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು, ಈ ಪ್ರದೇಶ ಹೊರತುಪಡಿಸಿ ಬೇರೆಡೆ ಮದ್ಯ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ.