ಗದಗ : ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಅಡವಿಟ್ಟು, ಟಿವಿ ಕೊಡಿಸಿದ್ದ ಮಹಿಳೆಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಅವರು ತಮ್ಮ ಆಪ್ತರ ಮುಖಾಂತರ ಮಾಂಗಲ್ಯ ಸರವನ್ನು ಬಿಡಿಸಿಕೊಳ್ಳಲು ಇಪ್ಪತ್ತು ಸಾವಿರ ರೂ. ಧನಸಹಾಯ ಮಾಡಿದ್ದಾರೆ.
ಇದನ್ನೂ ಓದಿ: ಈಟಿವಿ ಭಾರತ ಇಂಪ್ಯಾಕ್ಟ್.. ತಾಳಿ ಅಡವಿಟ್ಟ ತಾಯಿಗೆ ಸಹಾಯ ಹಸ್ತ
ಅಲ್ಲದೆ, ಅಧಿಕಾರಿ ವರ್ಗವೂ ಸಹ ನೆರವು ನೀಡಲು ಮುಂದಾಗಿದ್ದು, ಇಂದು ಸಂತ್ರಸ್ತ ಮಹಿಳೆ ಮನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳಾದ ರೂಪಾ ಉಪ್ಪಿನ ಹಾಗೂ ಪ್ರವೀಣ ಬೆಟಗೇರಿ ಭೇಟಿ ನೀಡಿ, ಪರಿಶೀಲಿಸಿ, ಮಾಹಿತಿ ಪಡೆದು ಮಕ್ಕಳ ರಕ್ಷಣಾ ಘಟಕ ಪ್ರಾಯೋಜಿಕತ್ವ ಯೋಜನೆ ಅಡಿ ನೆರವು ನೀಡುವುದಾಗಿ ಬರವಸೆ ನೀಡಿದ್ದಾರೆ.
ತಾಳಿ ಅಡವಿಟ್ಟ ತಾಯಿಗೆ ಸಚಿವ ಸಿ. ಸಿ. ಪಾಟೀಲ್ ಸಹಾಯಹಸ್ತ ನಮ್ಮ ಅಂದಿನ ವರದಿ: ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ
ಇನ್ನು ದಲಿತ ಸಂಘಟನೆಗಳು, ಮತ್ತು ಕನ್ನಡಪರ ಸಂಘಟನೆಯವರು ನೆರವಿನ ಹಸ್ತ ಚಾಚುವುದಾಗಿ ತಿಳಿಸಿವೆ.