ಗದಗ: ರಾಜಕಾರಣ ಮಾಡುವುದನ್ನು ಜನರಿಗಾಗಿ ಎಂಬುದನ್ನು ಅರ್ಥೈಸಬೇಕಾಗಿದೆ. ಹೀಗಾಗಿ ಎಸ್.ಎಸ್.ಪಾಟೀಲ್ ಹಾಗೂ ಇನ್ನುಳಿದ ಹಿರಿಯ ನಾಯಕರ ಮುಖಂಡತ್ವದಲ್ಲಿ ಜನರಿಗಾಗಿ ರಾಜ್ಯಾದ್ಯಂತ ಹೊಸ ಚಿಂತನೆ ತರುವ ವಿಚಾರವಿದೆ. ಅದನ್ನು ಗದಗನಿಂದಲೇ ಆರಂಭವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ಹೇಳಿದರು.
ಜನರಿಗಾಗಿ ರಾಜಕಾರಣ, ಅದಕ್ಕಾಗಿ ಹೊಸ ಚಿಂತನೆಯ ವಿಚಾರ: ಮಹಿಮಾ ಪಟೇಲ್ - 19th Commemoration of former Chief Minister jH Patel
ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲ್ರ 19ನೇ ಪುಣ್ಯಸ್ಮರಣೆ ಕಾರ್ಯಕ್ರಮ ಗದಗದಲ್ಲಿ ನಡೆಯಿತು.
ದಿ.ಜೆ.ಎಚ್.ಪಟೇಲ್ರ 19ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಶೈಶಾವಸ್ಥೆಯಲ್ಲಿದೆ. ಇದನ್ನು ಪ್ರಬುದ್ಧವಾಗಿಸುವ ನಿಟ್ಟಿನಲ್ಲಿ ಎಲ್ಲರನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ರಾಜಕಾರಣದಲ್ಲಿ ಬದ್ಧತೆ ಜವಾಬ್ದಾರಿ ತರುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲಿ ಈ ಬಗೆಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಹಿರಿಯರಾದ ಎಸ್.ಎಸ್.ಪಾಟೀಲ್, ಎಚ್.ಕೆ.ಪಾಟೀಲ್, ಬಸವರಾಜ್ ಹೊರಟ್ಟಿ ಅವರು ಆಲೋಚಿಸಿ ಈ ಬಗೆಯ ಕಾರ್ಯಕ್ರಮ ರೂಪಿಸಿದ್ದಾರೆ. ಇದನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿಲ್ಲ. ಎಲ್ಲಾ ಪಕ್ಷದವರನ್ನು ಇಲ್ಲಿ ಸೇರಿಸಿದ್ದೇವೆ. ಜೊತೆಗೆ ಎಲ್ಲಾ ಪಕ್ಷಗಳಲ್ಲಿ ಒಳ್ಳೆಯ ಆಲೋಚನೆಗಳನ್ನು ಒಳಗೊಂಡಿರುವವರನ್ನೇ ಸೇರಿಸಿದ್ದೇವೆ. ಇದು ನಿರಂತರವಾಗಿ ಬದಲಾವಣೆಯಾಗುವ ಸಮಾಜ. ಆ ಮೂಲಕ ಬದಲಾವಣೆಯತ್ತ ನಾವು ಹೊಸ ಚಿಂತನೆಗೆ ನಾಂದಿ ಹಾಡಬೇಕಾಗಿದೆ ಎಂದರು.