ಗದಗ:ಸೂಕ್ತ ದಾಖಲೆ ಇಲ್ಲದೇ ಕೊಂಡೊಯ್ಯುತ್ತಿದ್ದ 24 ಲಕ್ಷ ರೂಪಾಯಿ ನಗದನ್ನು ಗದಗ ಪೊಲೀಸರು ಜಪ್ತಿ ಮಾಡಿದ್ದಾರೆ. ಸೋಮವಾರ ರಾತ್ರಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದು, ಮುಳಗುಂದ ಚೆಕ್ ಪೋಸ್ಟ್ನಲ್ಲಿ ಪತ್ತೆಯಾಗಿದೆ.
''ದಾವಣಗೆರೆಯಿಂದ ಗದಗ ಕಡೆಗೆ ಪ್ರಯಾಣಿಕರು ಕಾರ್ನಲ್ಲಿ ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಸುಮಾರು 24 ಲಕ್ಷ ರೂಪಾಯಿ ಸೀಜ್ ಮಾಡಲಾಗಿದೆ. ಹಣ ಯಾರದ್ದು ಮತ್ತು ಯಾವ ಕಾರಣಕ್ಕೆ ಬಳಸಿಕೊಳ್ಳಲು ಯೋಚಿಸಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ವಾಹನ, ಆಸ್ತಿ ಖರೀದಿಗೆ ಹಣ ತೆಗೆದುಕೊಂಡು ಹೊರಟಿದ್ದೇವೆ ಎಂದು ಕಾರ್ನಲ್ಲಿದ್ದವರು ಹೇಳುತ್ತಿದ್ದಾರೆ. ಅನುಮಾನದ ಹಿನ್ನೆಲೆಯಲ್ಲಿ ಹಣ ಸೀಜ್ ಮಾಡಿದ್ದೇವೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದರು.
ಅನುಮಾನಾಸ್ಪದವಾಗಿ ಕಾರು ನಿಲ್ಲಿಸಿಕೊಂಡು 10 ಲಕ್ಷ ಹಣವನ್ನು ಎಣಿಕೆ ಮಾಡುತ್ತಿದ್ದಾಗ ಪೊಲೀಸರು ದಾಳಿ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ಜ.13ರಂದು ನಡೆದಿತ್ತು. ಕೆಎ 52 ಎನ್ 0603 ಇನೋವಾ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ನಿರ್ಜನ ಪ್ರದೇಶದಲ್ಲಿ ಕುಳಿತು ಕಂತೆ ಕಂತೆ ನೋಟು ಲೆಕ್ಕ ಮಾಡುತ್ತಿದ್ದರು. ರೌಂಡ್ಸ್ನಲ್ಲಿದ್ದ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಹಣ, ಚಿನ್ನ ಜಪ್ತಿ:ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದರು. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣವನ್ನು ವಶಕ್ಕೆ ಪಡೆದು ಮಹಾರಾಷ್ಟ್ರ ಮೂಲದ ಗ್ಯಾಂಗ್ವೊಂದರ ಹೆಡೆಮುರಿ ಕಟ್ಟಿದ್ದರು. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ವಶಕ್ಕೆ ಪಡೆದ ಪೊಲೀಸರು ರಾಜ್ಯದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನದಂಥ ಹತ್ತು ಪ್ರಕರಣಗಳಲ್ಲಿ ಬೇಕಾಗಿದ್ದ, ಖದೀಮರನ್ನು ಬಂಧಿಸಿ ಜೈಲಿಗಟ್ಟಿದ್ದರು. ಮಹಾರಾಷ್ಟ್ರ ಮೂಲದ ಮೂರು ಜನರ ಗ್ಯಾಂಗ್ ಪೊಲೀಸರಿಗೆ ಶರಣಾಗಿದ್ದರು. ಆರೋಪಿಗಳಿಂದ 22, 92,000 ಮೌಲ್ಯದ ಸ್ವತ್ತು ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ:ಬೆಂಗಳೂರು: ಪತ್ನಿ ಹತ್ಯೆಗೈದು ಪುಟ್ಟ ಮಗುವಿಗೂ ಚಾಕು ಇರಿದ!