ಗದಗ :ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿವೋರ್ವರು ವಕೀಲರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರ ಸಂಘದಿಂದ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪೊಲೀಸ್ ಅಧಿಕಾರಿಯಿಂದ ನಿಂದನೆ ಆರೋಪ: ನರಗುಂದದಲ್ಲಿ ವಕೀಲರ ಪ್ರತಿಭಟನೆ - undefined
ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿವೋರ್ವರು ವಕೀಲರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.
ಬಂಧನವಾಗಿದ್ದ ಆರೋಪಿಗೆ ಜಾಮೀನು ನೀಡಲು ಹೋದಾಗ ನರಗುಂದ ಸಿಪಿಐ ಸುಧೀರ್ ಬೆಂಕಿ ಅವರು ವಕೀಲರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಠಾಣೆಯ ಆವರಣದಲ್ಲಿ ಸಾರ್ವಜನಿಕವಾಗಿ ನಮ್ಮನ್ನು ಅವಮಾನಿಸಿದ್ದಾರೆ. ಸಂವಿಧಾನಾತ್ಮಕವಾಗಿ ವರ್ತಿಸದೇ ಅನುಚಿತವಾಗಿ ವರ್ತಿಸಿ ಅಪಮಾನ ಮಾಡಿದ್ದಾರೆ ಅಂತ ನರಗುಂದ ವಕೀಲರ ಸಂಘ ಆರೋಪಿಸಿದೆ. ಅಲ್ಲದೆ, ಕೋರ್ಟ್ ಕಲಾಪ ಬಹಿಷ್ಕರಿಸಿ ಸಿಪಿಐ ವಿರುದ್ಧ ಘೋಷಣೆ ಕೂಗಿದರು.
ಹಿರಿಯ ವಕೀಲರಾದ ಸಿ.ಎಸ್. ಪಾಟೀಲ್ ಹಾಗೂ ವಿ.ಎಸ್. ದೇಶಪಾಂಡೆ ಅವರಿಗೆ ಸಿಪಿಐ ನಿಂದಿಸಿದ್ದು ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ರು. ಇನ್ನು ಈ ಪ್ರತಿಭಟನೆಗೆ ಲಕ್ಷ್ಮೇಶ್ವರ ಹಾಗೂ ರೋಣ ವಕೀಲರ ಸಂಘದಿಂದಲೂ ಕೂಡ ಬೆಂಬಲ ವ್ಯಕ್ತವಾಯಿತು.