ಕರ್ನಾಟಕ

karnataka

ETV Bharat / state

ಗದಗನಲ್ಲಿ ಮತ್ತೆ ಗಾಂಜಾ ರೇಡ್ : 55 ಸಾವಿರ ಮೌಲ್ಯದ ಗಾಂಜಾ ವಶ, ಆರೋಪಿ ಬಂಧನ - Gadag crime latest news

ಅಕ್ರಮವಾಗಿ ಜಾಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Gadaga
Gadaga

By

Published : Oct 16, 2020, 7:59 PM IST

ಗದಗ :ಗಾಂಜಾ ಗಿಡಗಳನ್ನು ಬೆಳೆಸಿದ್ದ ಓರ್ವ ಆರೋಪಿಯನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲೂಕಿನ ಕೋಟುಮಚಗಿ ಗ್ರಾಮದ ನಿವಾಸಿ ಕಾಂತಪ್ಪ ಕೆಂಚಪ್ಪ ಮೇಟಿ ಬಂಧಿತ ಆರೋಪಿ. ಈತ ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದನು.

ಈ ಕುರಿತು ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು, ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಗಾಂಜಾದ ಗಿಡಗಳು, ಹೂ, ತೆನೆ ಬೀಜಗಳು ಸೇರಿದಂತೆ ಒಟ್ಟು 55 ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಗದಗ ಅಬಕಾರಿ ಡಿಸಿ ಮೋತಿಲಾಲ್ ನೇತೃತ್ವದಲ್ಲಿ ಗದಗ ವಲಯ ಹಾಗೂ ಜಿಲ್ಲಾ ಅಬಕಾರಿ ವಿಚಕ್ಷಣ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಕುರಿತು ಗದಗ ಅಬಕಾರಿ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details