ಗದಗ: ನಕಲಿ ಡಾಕ್ಟರ್ ಒಬ್ಬನನ್ನು ಜಿಲ್ಲೆಯ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ್ ರೋಗಿ ವೇಷದಲ್ಲಿ ಚಿಕಿತ್ಸೆಗೆ ಹೋಗಿ ಬಂಧಿಸಲು ಯತ್ನಿಸಿದ್ದಾರೆ. ಆದರೆ ಇದನ್ನರಿತ ವೈದ್ಯ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಮಾರುವೇಷದಲ್ಲಿ ತೆರಳಿದ ಮಹಿಳಾ ಅಧಿಕಾರಿ ತಂಡ: ಸ್ಥಳದಿಂದ ಕಾಲ್ಕಿತ್ತ ನಕಲಿ ಡಾಕ್ಟರ್
ಗದಗ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ ಮುಗಿಸಿದವರು ಸ್ಟೆಥಸ್ಕೋಪ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇಂತಹ ನಕಲಿ ವೈದ್ಯನ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊರೊನಾ ಸಂಕಟದ ಗದಗದಲ್ಲಿ ನಡುವೆ ನಕಲಿ ವೈದ್ಯನ ಹಾವಳಿ
ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಲ್ಲಿಕಾರ್ಜುನಯ್ಯ ಹಿರೇಮಠ ಬಲೆಗೆ ಬಿದ್ದ ನಕಲಿ ವೈದ್ಯನಾಗಿದ್ದು,ಈತ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡಿ ಉದ್ಯೋಗ ಸಿಗದೇ ಹಣ ಗಳಿಸಲು ಈ ರೀತಿ ಕೃತ್ಯವೆಸುತ್ತಿದ್ದ. ಈತ ಕೊಪ್ಪಳ ಮೂಲದ ನಕಲಿ ಡಾಕ್ಟರ್ ಅಂತ ಹೇಳಲಾಗಿದ್ದು,ಮುಂಡರಗಿ ತಾಲೂಕಿನ ಪಾಪನಾಸಿ, ಶಿಂಗಟರಾಯನಕೇರಿ, ಕದಂಪೂರ ಸೇರಿ ಹಲವು ಗ್ರಾಮಗಳಲ್ಲಿ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
Last Updated : Apr 22, 2020, 4:00 PM IST