ಗದಗ:ಕಾಂಗ್ರೆಸ್ ಅಧ್ಯಕ್ಷಮಲ್ಲಿಕಾರ್ಜುನಖರ್ಗೆಯವರೇ ನೀವು ನರೇಂದ್ರ ಮೋದಿ ವಿರುದ್ಧ ಎಷ್ಟೇ ಮಾತುಗಳನ್ನಾದರೂ ಜನತೆಯ ಮತಗಳು ಬಿಜೆಪಿಗೆ ಬಂದೇ ಬರುತ್ತೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೋದಿ ಕೋಟ್ಯಾಂತರ ಜನರನ್ನು ಸಾಲದಿಂದ ಮುಕ್ತ ಮಾಡುತ್ತಿದ್ದಾರೆ. ಖರ್ಗೆ ಅವರು ಮೋದಿ ಅವರಿಗೆ ಆಡಿದ ಮಾತುಗಳು ನಿಮ್ಮ ಮನ ನೋಯಿಸಿದೆ. ಅವರಿಗೆ ಜನತೆ ಬುದ್ಧಿ ಕಲಿಸಬೇಕು ಎಂದರು.
ಖರ್ಗೆ ಅವರೇ ನಿಮ್ಮ ಹೇಳಿಕೆಯಿಂದ ನಿಮಗೆ ಯಾವುದೇ ಲಾಭ ಆಗುವುದಿಲ್ಲ. ನಿಮಗೆ ಜನತೆ ಅಧಿಕಾರ ಕೊಟ್ಟಾಗ ಕರ್ನಾಟಕವನ್ನು ದಿಲ್ಲಿಯ ಎಟಿಎಂ ಮಾಡಿಕೊಂಡ್ರಿ, ಲಿಂಗಾಯತ ಸಮಾಜದ ವಿರೋಧ ಮಾಡಿದವರು ಕಾಂಗ್ರೆಸ್, ರಾಹುಲ್ ಗಾಂಧಿ ಅವರೇ ನಿಮ್ಮ ಹಿಂದೆ ಇರುವ ನಾಯಕರು ನಿಮಗೆ ಲಾಭ ತರುವುದಿಲ್ಲ. ಅವರು ಆಡುವ ಮಾತುಗಳು ಬಿಜೆಪಿಗೆ ಹೆಚ್ಚಿನ ಮತಗಳನ್ನು ತಂದು ಕೊಡುತ್ತೆ. ನೀವು ನರೇಂದ್ರ ಮೋದಿಯವರಿಗೆ ಎಷ್ಟು ಟೀಕಿಸುತ್ತಿರೋ ಅಷ್ಟು ಬಿಜೆಪಿಗೆ ಮತ ಬರುತ್ತೆ ಹಾಗೂ ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತವೆ ಎಂದು ಹೇಳಿದರು.
ನರೇಂದ್ರ ಮೋದಿ ಸರ್ಕಾರ ಮತ್ತು ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ರೈತರ ಏಳಿಗೆಗಾಗಿ ಶ್ರಮ ವಹಿಸಿದೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸರ್ಕಾರ ಇದೆ. ಸಂವಿಧಾನದಲ್ಲಿ ಮೀಸಲಾತಿ ದಲಿತರಿಗೆ ಸಿಗುತ್ತೆ. ಎಸ್ಸಿ, ಎಸ್ಟಿ, ಲಿಂಗಾಯತ, ಒಕ್ಕಲಿಗ ಮಿಸಲಾತಿ ಹೆಚ್ಚಿಸಲಾಗಿದೆ. ಮುಸ್ಲಿಂ ಅವರಿಗೆ ನಮ್ಮ ಬಿಜೆಪಿ ಸರ್ಕಾರ ಮೀಸಲಾತಿ ರದ್ದುಪಡಿಸಿತು. ಆದರೆ, ಕಾಂಗ್ರೆಸ್ ಪಕ್ಷದವರು ಮತ್ತೆ ಮುಸ್ಲಿಂರ ಮೀಸಲಾತಿ ಮರಳಿ ಕೊಡುತ್ತೇವೆ ಅಂತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದವರು ದಲಿತರಿಗಾಗಿ, ಬಡವರಿಗಾಗಿ ಏನು ಮಾಡಿದ್ದೀರಿ?. ಅವರ ಜೀವನ ರೂಪಿಸುವುದಕ್ಕೆ ಏನು ಮಾಡಿದ್ದೀರಿ? ಅನ್ನೋದು ದೇಶದ ಜನರ ಪ್ರಶ್ನೆಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು 70 ವರ್ಷಗಳಿಂದ ನಿರಾಕರಿಸಿದರು. ಆದರೆ, ನರೇಂದ್ರ ಮೋದಿ ಅವರು ರಾಮ ಮಂದಿರ ಕಟ್ಟಲು ಪ್ರಾರಂಭಿಸಿದರು. ಬಿಜೆಪಿ ಸರ್ಕಾರ ಬಡವರಿಗಾಗಿ ಮನೆ, ರೈತನಿಧಿ, ಹೆಣ್ಣು ಮಕ್ಕಳಿಗೆ, ಶಿಕ್ಷಣಕ್ಕಾಗಿ ದುಡಿಯುತ್ತಿದೆ ಎಂದರು.