ಕರ್ನಾಟಕ

karnataka

ETV Bharat / state

ವೀಕೆಂಡ್ ಲಾಕ್‌ಡೌನ್ ಮುಗಿಯುತ್ತಿದ್ದಂತೆ ತರಕಾರಿ ಖರೀದಿಗೆ ಮುಗಿಬಿದ್ದ ಜನರು - Weekend Lockdown

ಹರಾಜು ಪ್ರಕ್ರಿಯೆ ಹಾಗೂ ಮಾರಾಟದ ಭರಾಟೆಯಲ್ಲಿ ದಲ್ಲಾಳಿಗಳು, ವ್ಯಾಪಾರಸ್ಥರು, ಗ್ರಾಹಕರು ಸಾಮಾಜಿಕ ಅಂತರ, ಮಾಸ್ಕ್ ಮರೆತ್ತಿದ್ದರು..

gadag
ವೀಕೆಂಡ್ ಲಾಕ್‌ಡೌನ್ ಮುಗಿಯುತ್ತಿದ್ದಂತೆ ತರಕಾರಿ ಖರೀದಿಗೆ ಮುಗಿಬಿದ್ದ ಜನರು

By

Published : Apr 26, 2021, 1:54 PM IST

ಗದಗ :ವೀಕೆಂಡ್ ಲಾಕ್‌ಡೌನ್ ಮುಕ್ತಾಯವಾಗುತ್ತಿದ್ದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಜನರು ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.

ವೀಕೆಂಡ್ ಲಾಕ್‌ಡೌನ್ ಮುಗಿಯುತ್ತಿದ್ದಂತೆ ತರಕಾರಿ ಖರೀದಿಗೆ ಮುಗಿಬಿದ್ದ ಜನರು

ನಗರದ ಎಪಿಎಂಸಿ ಮಾರುಕಟ್ಟೆ, ಗ್ರೀನ್ ಮಾರುಕಟ್ಟೆ ಹಾಗೂ ರಂಗನವಾಡಿ ಗಲ್ಲಿ ಮಾರುಕಟ್ಟೆಗಳಲ್ಲಿ ಜನರು ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.

ಜನದಟ್ಟಣೆ ಉಂಟಾಗಬಾರದೆಂದು ಗ್ರೀನ್ ಮಾರುಕಟ್ಟೆಯನ್ನು ಮೂರು ಕಡೆ ವಿಭಜಿಸಲಾಗಿದೆ. ಆದರೂ ಕೂಡ ಜನರು ಕೊರೊನಾ ನಿಯಮ ಉಲ್ಲಂಘಿಸಿ ಗುಂಪುಗೂಡಿದ್ದರು.

ಹರಾಜು ಪ್ರಕ್ರಿಯೆ ಹಾಗೂ ಮಾರಾಟದ ಭರಾಟೆಯಲ್ಲಿ ದಲ್ಲಾಳಿಗಳು, ವ್ಯಾಪಾರಸ್ಥರು, ಗ್ರಾಹಕರು ಸಾಮಾಜಿಕ ಅಂತರ, ಮಾಸ್ಕ್ ಮರೆತ್ತಿದ್ದರು.

ಓದಿ:ಮಾಸ್ಕ್​ ಹಾಕದೇ ಓಡಾಡುತ್ತಿದ್ದವರಿಗೆ ಬಟ್ಟೆ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿದ ಪೊಲೀಸರು.. ವಿಡಿಯೋ

ABOUT THE AUTHOR

...view details