ಕರ್ನಾಟಕ

karnataka

ETV Bharat / state

'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಜನ! - ಗದಗ ಶ್ರೀ ಮಾರುತೇಶ್ವರ ರಥೋತ್ಸವ

ಶ್ರೀ ಮಾರುತೇಶ್ವರ ರಥೋತ್ಸವದಲ್ಲಿ ಯುವಕರು ಬಾಳೆಹಣ್ಣಿನ ಮೇಲೆ ಮುಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ಎಂದು ಬರೆದು ಬಾಳೆಹಣ್ಣನ್ನು ತೇರಿಗೆ ಎಸೆದರು.

people-pray-for-siddarmaih-to-become-next-cm
people-pray-for-siddarmaih-to-become-next-cm

By

Published : Apr 17, 2021, 8:12 PM IST

ಗದಗ:ಮುಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಅಂತ ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಎಸದು ಜನರು ಹರಕೆ ಹೊತ್ತುಕೊಂಡಿದ್ದಾರೆ. ಗದಗ ತಾಲೂಕಿನ ತಿಮ್ಮಾಪೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೋವಿಡ್ 2ನೇ ಅಲೆಯ ನಡುವೆಯೂ ಗ್ರಾಮದ ಶ್ರೀ ಮಾರುತೇಶ್ವರ ರಥೋತ್ಸವ ಅದ್ಧೂರಿಯಾಗಿ ನೆರವೇರಿದ ಯುಗಾದಿ ಹಬ್ಬದ ಪ್ರಯುಕ್ತ ನಡೆದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಬಣ್ಣದ ಹೊಂಡದಲ್ಲಿ ಕಾಯಿ ಹರಿಯುವುದರ ಮೂಲಕ ಹೊಂಡವನ್ನು ತುಳುಕಿಸಿ ಯವಕರು ಸಂಭ್ರಮಿಸಿದರು.

'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಬಾಳೆಹಣ್ಣಿನ ಮೇಲೆ ಬರೆದ ಯುವಕರು

ಮಾರುತೇಶ್ವರ ಮಹಾರಥೋತ್ಸವ ಸಕಲ ವಾದ್ಯಮೇಳಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ಜರಗಿತು. ರಥೋತ್ಸವದಲ್ಲಿ ಯುವಕರು ಬಾಳೆಹಣ್ಣಿನ ಮೇಲೆ ಮುಂದಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರು ಎಂದು ಬರೆದು ಬಾಳೆಹಣ್ಣನ್ನು ತೇರಿಗೆ ಎಸೆದರು.

ABOUT THE AUTHOR

...view details