ಗದಗ:ಕೊರೊನಾ ವೈರಸ್ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈ ವೈರಸ್ನಿಂದ ಗದಗದಲ್ಲಿ ಓರ್ವ ವೃದ್ಧೆ ಸಾವನ್ನಪ್ಪಿದ್ರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ.
ಗದಗದಲ್ಲಿ ಜನ್ಧನ್ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನತೆ - ಗದಗ ಸುದ್ದಿ
ಕೇಂದ್ರ ಸರ್ಕಾರದ ಜನ್ಧನ್ ಖಾತೆಯ ಫಲಾನುಭವಿಗಳು 500 ರೂ. ಹಣ ಪಡೆಯಲು ಗದಗದ ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್, ಎಸ್ಬಿಐ ಸೇರಿದಂತೆ ಅನೇಕ ಬ್ಯಾಂಕುಗಳ ಮುಂದೆ ಮುಗಿಬಿದ್ದಿದ್ದರು.
![ಗದಗದಲ್ಲಿ ಜನ್ಧನ್ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನತೆ people of Gadgadh to get money for the Jan Dhan project ..!](https://etvbharatimages.akamaized.net/etvbharat/prod-images/768-512-6775811-502-6775811-1586777195671.jpg)
ಜನ್ಧನ್ ಯೋಜನೆಯ ಹಣ ಪಡೆಯಲು ಮುಗಿಬಿದ್ಧ ಗದಗ ಜನತೆ
ಜನ್ಧನ್ ಖಾತೆಯ ಹಣ ಪಡೆಯಲು ಮುಗಿಬಿದ್ಧ ಗದಗ ಜನತೆ
ಕೇಂದ್ರ ಸರ್ಕಾರದ ಜನ್ಧನ್ ಖಾತೆಯ ಫಲಾನುಭವಿಗಳು 500 ರೂ. ಹಣ ಪಡೆಯಲು ಬ್ಯಾಂಕ್ಗಳಿಗೆ ಮುಗಿಬಿದ್ದಿದ್ದರು. ನಗರದ ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್, ಎಸ್ಬಿಐ ಸೇರಿದಂತೆ ಅನೇಕ ಬ್ಯಾಂಕುಗಳ ಮುಂದೆ ಗುಂಪು ಗುಂಪಾಗಿ ನಿಂತಿದ್ದರು. ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ಹೇಳಿದರೂ ಡೋಂಟ್ ಕೇರ್ ಅಂತಿದ್ದಾರೆ.
ಮಹಿಳೆಯರು, ವೃದ್ಧರು ಸುಡು ಬಿಸಿಲನ್ನೂ ಲೆಕ್ಕಿಸದೆ, ಸಾಮಾಜಿಕ ಅಂತರವನ್ನೂ ಕಾಯ್ದಕೊಳ್ಳದೆ ಜನ್ಧನ್ ಖಾತೆಯ ಹಣ ಪಡೆಯಲು ಸಾಲುಗಟ್ಟಿ ನಿಂತಿದ್ದರು.