ಗದಗ: ಕೊರೊನಾ ವೈರಸ್ ಹರಡದಂತೆ ಲಾಕ್ ಡೌನ್ ಎಷ್ಟೇ ಬಿಗಿಗೊಳಿಸಿದ್ರೂ, ಜಿಲ್ಲೆಯ ಜನರು ಮಾತ್ರ ಬುದ್ದಿ ಕಲಿಯುವ ಲಕ್ಷಣಗಳು ಕಾಣ್ತಿಲ್ಲ. ಬೆಳಿಗ್ಗೆಯಿಂದ ಡಬಲ್ ಲಾಕ್ ಡೌನ್ ಆಗುತ್ತೆ ಎಂದು ತಿಳಿದು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಗೆ ಮುಗಿಬಿದ್ದ ಜನ... - corona virus effect
ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗದಗದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬಿದ್ದರು.
ಮಧ್ಯ ರಾತ್ರಿಯೇ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟವಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರೈತರು, ವ್ಯಾಪಾರಸ್ಥರು, ದಲ್ಲಾಳಿಗಳು, ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರು ಒಂದಡೆ ಗುಂಪುಸೇರಿ ತರಕಾರಿ ಮಾರಾಟ ಹಾಗೂ ಖರೀದಿಯ ಹರಾಜು ಪ್ರಕ್ರಿಯೆಗೆ ಮುಗಿಬಿದ್ದರು. ಜಿಲ್ಲೆಯಲ್ಲಿ ವಾರದಲ್ಲಿ 2 ದಿನ ಅಂದ್ರೆ ಬುಧವಾರ ಹಾಗೂ ಭಾನುವಾರ ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮುಖಕ್ಕೆ ಮಾಸ್ಕ್ ಧರಿಸಿ, ಮನೆಯಿಂದ ಹೊರಬರಬೇಡಿ ಎಂಬ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮನವಿಗೆ ಜನರು ಕ್ಯಾರೆ ಅನ್ನುತ್ತಿಲ್ಲ. ಇನ್ನು ರಾತ್ರಿ ಸ್ವತಃ ಗದಗ ಎಸ್ಪಿ ಯತೀಶ್ ಎಪಿಎಂಸಿಗೆ ಬಂದ್ರೂ ಜನಜಂಗುಳಿ ನಿಯಂತ್ರಣಕ್ಕೆ ಬರಲಿಲ್ಲ. ಪರಿಶೀಲನೆ ವೇಳೆ ಎಸ್ಪಿ ಯತೀಶ್ ಮುಂದಿನ ಅಂಗಡಿಗೆ ಹೋದ ಕೂಡಲೇ ಜನ್ರು ತಮ್ಮ ಹಳೆ ಚಾಳಿಯನ್ನು ಮುಂದುವರೆಸಿದ ದೃಶ್ಯಗಳು ಕಂಡುಬಂದವು.