ಕರ್ನಾಟಕ

karnataka

ETV Bharat / state

ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿ ನೇಣಿಗೆ ಶರಣು.. - Gadag news

ಕಳೆದ 15 ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಇಂದು ನೇಣಿಗೆ ಶರಣಾಗಿದ್ದಾನೆ.

Patient commits suicide in hospital
ರೋಗಿ ನೇಣಿಗೆ ಶರಣು

By

Published : Jun 7, 2020, 4:20 PM IST

ಗದಗ :ಲೀವರ್ ವೈಫಲ್ಯದಿಂದ ಬಳಲುತ್ತಿರುವ ರೋಗಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಗದಗ ನಿವಾಸಿ 34 ವರ್ಷದ ರಾಘು ಗೋಕಾಕ್ ಎಂದು ಗುರುತಿಸಲಾಗಿದೆ. ಮೃತ ರಾಘು, ಕೆಲ ವರ್ಷಗಳಿಂದ ಲೀವರ್ ವೈಫಲ್ಯದಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಕಳೆದ 15 ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಇಂದು ನೇಣಿಗೆ ಶರಣಾಗಿದ್ದಾನೆ.

ರೋಗಿ ನೇಣಿಗೆ ಶರಣು

ಗ್ರಾಮೀಣ ಠಾಣೆ ಪಿಎಸ್​ಐ ಮಲ್ಲಿಕಾರ್ಜುನ ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details