ಗದಗ:ಮನೆಗೆ ಪೇಂಟ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸಾವು - ನರಗುಂದ ಪೊಲೀಸ್ ಠಾಣೆ
ಮನೆಗೆ ಪೇಂಟ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
![ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸಾವು dsd](https://etvbharatimages.akamaized.net/etvbharat/prod-images/768-512-7862510-thumbnail-3x2-vish.jpg)
ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸಾವು
ವಿದ್ಯುತ್ ಸ್ಪರ್ಶಿಸಿ ಪೇಂಟರ್ ಸಾವು
ಪ್ರವೀಣ್ ಅಬ್ಬಿಗೇರಿ (35) ಮೃತ ದುರ್ದೈವಿ. ಮಂಜುನಾಥ ಚಿತ್ರಗಾರ ಎಂಬುವವರ ಮನೆಯ ಮೇಲಿರುವ ಸರ್ವೀಸ್ ವೈರ್ ಸ್ಪರ್ಶದಿಂದ ಈ ಅವಘಡ ಸಂಭವಿಸಿದೆ.
ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.