ಕರ್ನಾಟಕ

karnataka

ETV Bharat / state

ನೀರಿಗಾಗಿ ರಾಜಕಾರಣ ಮಾಡುವಂತ ಪಕ್ಷವಲ್ಲ: ಸಚಿವ ಸಿ ಸಿ ಪಾಟೀಲ್

ನಾವು ಪ್ರಾರಂಭಿಸಿದ ಹೋರಾಟಕ್ಕೆ ಜಯ ಸಿಕ್ಕಿದೆ- ನಾಲಾ ಜೋಡಣೆಯ ಆದೇಶ ಪತ್ರ ಹಿಡಿದು ಬೃಹತ್​ ಸಮಾವೇಶಕ್ಕೆ ತಯಾರಿ- ಸಚಿವ ಸಿ ಸಿ ಪಾಟೀಲ್​ ಹೇಳಿಕೆ

our-party-is-not-one-to-do-politics-for-water
ನೀರಿಗಾಗಿ ರಾಜಕಾರಣ ಮಾಡುವಂತ ಪಕ್ಷವಲ್ಲ: ಸಚಿವ ಸಿಸಿ ಪಾಟೀಲ್

By

Published : Jan 1, 2023, 10:48 PM IST

ನೀರಿಗಾಗಿ ರಾಜಕಾರಣ ಮಾಡುವಂತ ಪಕ್ಷವಲ್ಲ: ಸಚಿವ ಸಿಸಿ ಪಾಟೀಲ್

ಗದಗ :ಕೇಂದ್ರ ಸರ್ಕಾರಕಳಸಾ-ಬಂಡೂರಿ ಯೋಜನೆಯ ಆದೇಶದ ಹೊರಡಿಸುವುದರ ಬಗ್ಗೆ ಮಾತನಾಡಿದ ಸಚಿವ ಸಿ ಸಿ ಪಾಟೀಲ್,​ ನಾವು ಆರಂಭ ಮಾಡಿದ್ದ ಹೋರಾಟಕ್ಕೆ ನಮ್ಮಿಂದನೇ ಮೋಕ್ಷ ಸಿಗುವಂತ ಕಾಲ ಕೂಡಿಬಂದಿದೆ ಎಂದು ಸಚಿವ ಸಿ ಸಿ ಪಾಟೀಲ್​ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೊಮ್ಮಾಯಿಯವರು ಎಂಎಲ್​ಸಿ ಆಗಿದ್ದಾಗ ರಕ್ತದಿಂದ ಪತ್ರ ಬರೆದಿದ್ದರು. ಸಿಎಂ ಆಗಿ ಅಧಿಕಾರದಲ್ಲಿರುವಾಗ ಯೋಜನೆಯ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಆಗಿ ಅಧಿಕಾರದಲ್ಲಿರುವಾಗ ಕಳಸಾ-ಬಂಡೂರಿ ಯೋಜನೆಯ ಆದೇಶ ಹೊರಡಿಸಿದ್ದಾರೆ. ಇದು ನಮ್ಮ ಸರ್ಕಾರದ ನಿಯತ್ತು. ನಮ್ಮ ಸರ್ಕಾರದ ತಾಕತ್ತು. ಕಳಸಾ ಬಂಡೂರಿ ನಾಲಾ ಯೋಜನೆ ಜೋಡಣೆಯ ಆದೇಶ ಪ್ರತಿ ಹಿಡಿದು ಸಮಾವೇಶ ಮಾಡೋಣವೆಂದು ಸಿಎಂ ಹೇಳಿದ್ದಾರೆ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.

ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚುನಾವಣೆ ಸಂಬಂಧ ಮಾಡಿರೋ ಘೋಷಣೆ ಇದಲ್ಲ. ನೀರಿಗಾಗಿ ರಾಜಕಾರಣ ಮಾಡುವಂತ ನಮ್ಮ ಪಕ್ಷವಲ್ಲ. ನಿಮ್ಮ‌ ಕೈಯಿಂದ ಕಳಸಾ ಸಮಸ್ಯೆ ಬಗೆಹರಿಸಲಾಗಲಿಲ್ಲ. ಸಮಸ್ಯೆ ಬಗೆಹರಿಸಿದವರಿಗಾದರೂ ಒಪ್ಪಿಕೊಳ್ಳುವ ಹೃದಯವಂತಿಕೆಯೂ ನಿಮಗಿಲ್ಲ ಎಂದು ಹೇಳಿ ಕಾಂಗ್ರೆಸ್​ಗೆ ಟಾಂಗ್ ನೀಡಿದರು.

ನೀರಾವರಿಗೆ ನಿಮ್ಮದು ಕೊಡುಗೆ ಅಂದ್ರೆ ಕಾಲುವೆಗೆ ಅಡ್ಡ ಗೋಡೆ ಹಾಕಿದ್ದೇ ನಿಮ್ಮ ಸಾಧನೆ. ಹೆಚ್.ಕೆ. ಪಾಟೀಲರು ನೀರಾವರಿ ಸಚಿವರಾಗಿದ್ದಾಗ ಏನ್ ಮಾಡಿದ್ದರು ಎಂದು ಇದೇ ವೇಳೆ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ದಾವಣಗೆರೆಯಲ್ಲಿ ಹೊಸ ವರ್ಷಾಚರಣೆ ವೇಳೆ ಫೋಟೋ ಗಲಾಟೆ : ಯುವಕ ಯುವತಿಯರ ಮೇಲೆ ಪುಂಡರಿಂದ ಹಲ್ಲೆ

ABOUT THE AUTHOR

...view details