ಗದಗ: ಜಿಲ್ಲೆಯಲ್ಲಿ ಆರ್ಭಟಿಸಿದ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆ ನೆಲದಲ್ಲೇ ಕೊಳೆತಿದೆ. ಇದರಿಂದ ಬೇಸತ್ತ ರೈತರೊಬ್ಬರು ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿದ್ದಾರೆ.
ಅತಿವೃಷ್ಟಿಯಿಂದ ಕೊಳೆತ ಈರುಳ್ಳಿ.. ಟ್ರ್ಯಾಕ್ಟರ್ ಮೂಲಕ ಬೆಳೆ ನೆಲಸಮ ಮಾಡಿದ ರೈತ - onion crop destroy in gadaga
ಗದಗ ಜಿಲ್ಲೆಯಲ್ಲಿ ಈ ಬಾರಿ ಸುರಿದ ಅತಿಯಾದ ಮಳೆಗೆ ಗೋವಿಂದರೆಡ್ಡಿ ನಾಗನೂರ ಎಂಬ ರೈತರೊಬ್ಬರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಇದರಿಂದ ಬೇಸತ್ತ ರೈತ ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನೆಲಸಮ ಮಾಡಿದ್ದಾರೆ.
ಅತಿವೃಷ್ಟಿಗೆ ನೆಲಕಚ್ಚಿದ ಈರುಳ್ಳಿ ಬೆಳೆ
ತಾಲೂಕಿನ ಸಂಬಾಪೂರದ ಗೋವಿಂದರೆಡ್ಡಿ ನಾಗನೂರ ಎಂಬ ರೈತ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ತಾವೇ ನಾಶಪಡಿಸಿದ್ದಾರೆ. ಕಟಾವು ಮಾಡಿದರೂ ಅದರಲ್ಲಿ ಸ್ವಲವೂ ಲಾಭ ಸಿಗದೆ ಖರ್ಚಿನ ಹೊರೆಯಾಗ್ತಿತ್ತು ಎಂದಿದ್ದಾರೆ.
ಈ ಕುರಿತು ಮಾತನಾಡಿದ ಗೋವಿಂದರೆಡ್ಡಿ, ಈರುಳ್ಳಿ ಬೆಳೆಗೆ ಸುಮಾರು 50 ಸಾವಿರ ರೂ. ಖರ್ಚು ಮಾಡಿದ್ದೆ. ಕಳೆದೆ ವರ್ಷ ನಾಲ್ಕು ಎಕರೆ ಈರುಳ್ಳಿ ಬೆಳೆಗೆ ಭರ್ಜರಿ ಲಾಭ ಸಿಕ್ಕಿತ್ತು. ಆದರೆ ಈ ವರ್ಷ ಅತಿಯಾದ ಮಳೆ ಇಡೀ ಬೆಳೆಯನ್ನು ಹಾಳು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.