ಕರ್ನಾಟಕ

karnataka

ETV Bharat / state

ತುಂಡಾಗಿ ಬಿದ್ದ ಎತ್ತಿನಗಾಡಿ : ಓರ್ವ ಮಹಿಳೆ ಸಾವು,ಮೂವರು ಗಂಭೀರ - gadaga latest news

ಜಮೀನು ಕೆಲಸ ಮುಗಿಸಿ ಗ್ರಾಮಕ್ಕೆ ವಾಪಾಸ್ ಬರುವಾಗ ಎತ್ತಿನ ಗಾಡಿ ಮುರಿದು ನೆಲಕ್ಕೆ ಉರುಳಿದೆ. ಇದರಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ತುಂಡಾಗಿ ಬಿದ್ದ ಎತ್ತಿನಗಾಡಿ

By

Published : Sep 1, 2019, 2:27 AM IST

ಗದಗ: ಎತ್ತಿನ ಬಂಡಿ ತುಂಡಾಗಿ ಬಿದ್ದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಬಳಿ ನಡೆದಿದೆ.‌

ಗಂಗಮ್ಮ(55) ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ರೈತ ಸೇರಿ ಇನ್ನುಳಿದ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈತ ವಿರೂಪಾಕ್ಷ (68) ಅಕ್ಕಮಹಾದೇವಿ (55) ಶೆಕವ್ವಾ (50) ಗಾಯಾಳುಗಳು.

ಜಮೀನು ಕೆಲಸ ಮುಗಿಸಿ ಗ್ರಾಮಕ್ಕೆ ವಾಪಾಸ್ ಬರುವಾಗ ದುರಂತ ಸಂಭವಿಸಿದೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details