ಗದಗ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಪಲ್ಟಿಯಾಗಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ ಘಟನೆ ಗದಗನಲ್ಲಿ ನಡೆದಿದೆ.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಅಬ್ಬಿಗೇರಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ರೋಣದಿಂದ ಗದಗ ಕಡೆಗೆ ಬರುತ್ತಿದ ಕಾರು ಅಪಘಾವಾತ ಕೂಡಲೇ ಸ್ಥಳದಿಂದ ಗಾಯಾಳುಗಳು ನಾಪತ್ತೆಯಾಗಿದ್ದಾರೆ. ಗಾಯಾಳುಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.