ಕರ್ನಾಟಕ

karnataka

ETV Bharat / state

ದುಬಾರಿ ಬೆಲೆಗೆ ಗೊಬ್ಬರ ಮಾರಾಟ: ಪರವಾನಗಿ ರದ್ದು ಮಾಡಿದ ಅಧಿಕಾರಿಗಳು - ಶ್ರೀ ಆಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆ

ಅಂತೂರು ಬೆಂತೂರು ಗ್ರಾಮದಲ್ಲಿನ ಶ್ರೀ ಆಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ ಕೃಷಿ ಅಧಿಕಾರಿಗಳು ದಾಳಿ ಮಳಿಗೆ ಪರವಾನಗಿ ರದ್ದು ಮಾಡಿ ಸೀಜ್ ಮಾಡಿದ್ದಾರೆ.

Officials canceled the sale fertilizer expensive price
ಗದಗ: ದುಬಾರಿ ಬೆಲೆಗೆ ಗೊಬ್ಬರ ಮಾರಾಟ, ಪರವಾನಿಗೆ ರದ್ದು ಮಾಡಿದ ಅಧಿಕಾರಿಗಳು

By

Published : Aug 14, 2020, 12:52 PM IST

Updated : Aug 14, 2020, 1:03 PM IST

ಗದಗ: ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಸೀಜ್ ಮಾಡಿದ ಘಟನೆ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ ನಡೆದಿದೆ.

ದುಬಾರಿ ಬೆಲೆಗೆ ಗೊಬ್ಬರ ಮಾರಾಟ: ಪರವಾನಗಿ ರದ್ದು ಮಾಡಿದ ಅಧಿಕಾರಿಗಳು

ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿನ ಶ್ರೀ ಆಗ್ರೋ ಕೇಂದ್ರ ಕೃಷಿ ಪರಿಕರ ಮಾರಾಟ ಮಳಿಗೆಯಲ್ಲಿ ಹೆಚ್ಚಿನ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ ಕೃಷಿ ಅಧಿಕಾರಿಗಳು ದಾಳಿ ಮಾಡಿ ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರೋದು ಕಂಡು ಬಂದ ಹಿನ್ನೆಲೆಯಲ್ಲಿ ಮಳಿಗೆ ಪರವಾನಗಿ ರದ್ದು ಮಾಡಿ, ಸೀಜ್ ಮಾಡಿದ್ದಾರೆ.

ಕಳೆದ 15 ದಿನಗಳಿಂದ ಗದಗ ಜಿಲ್ಲೆಯಲ್ಲಿ ಕೃತಕ ಯೂರಿಯಾ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಜಿಲ್ಲೆಯಲ್ಲಿ ಹಲವು ದಿನಗಳಿಂದ ಗೊಬ್ಬರಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಎಚ್ಚೆತ್ತ ಅಧಿಕಾರಿಗಳು ಅಂತಹ ಅಂಗಡಿಗಳನ್ನ ಹುಡುಕಿ ಪರವಾನಗಿ ರದ್ದು ಮಾಡಿ, ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

Last Updated : Aug 14, 2020, 1:03 PM IST

ABOUT THE AUTHOR

...view details