ಗದಗ: ಇಂದು ಹೊಸದಾಗಿ ಮತ್ತೆ 31 ಜನರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದ್ದು, ಸದ್ಯ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಗದಗದಲ್ಲಿ ಯಾರಲ್ಲೂ ಕೊರೊನಾ ಪಾಸಿಟಿವ್ ಇಲ್ಲ: ಡಿಸಿ - ಪಿ.166 ಪ್ರಕರಣ ಒಂದು ಕೊವಿಡ್-19 ಎಂದು ಧೃಡ
ದಿನದಿಂದ ದಿನನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹಾಗಾಗಿ ರೋಗ ಲಕ್ಷಣ ಕಾಣಿಸಿಕೊಂಡವರ ಪರೀಕ್ಷೆಯನ್ನು ತುರ್ತಾಗಿ ಮಾಡಲಾಗುತ್ತಿದೆ.
ಸದ್ಯ ಗದಗನಲ್ಲಿ ಯಾರಲ್ಲೂ ಕೊರೊನಾ ಪೊಸಟಿವ್ ಇಲ್ಲಾ: ಡಿಸಿ ಪ್ರಕಟಣೆ
ಇನ್ನು 28 ದಿನಗಳ ನಿಗಾ ಅವಧಿ ಪೂರೈಸಿದವರು 104 ಜನ. ಆದರೆ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 181 ಜನ ಇದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರು 46 ಜನ ಇದ್ದಾರೆ. ಇಂದಿನ 21 ಸೇರಿ 175 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಒಟ್ಟು 144 ಮಾದರಿಗಳ ವರದಿ ನೆಗೆಟಿವ್ ಎಂದು ಬಂದಿವೆ.
ಇನ್ನೂ 30 ವರದಿಗಳು ಬಾಕಿ ಇವೆ. 166ನೇ ಪ್ರಕರಣ ಕೊವಿಡ್-19 ಎಂದು ದೃಢಪಟ್ಟಿತ್ತು ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
TAGGED:
ಜಿಲ್ಲಾಧಿಕಾರಿ ಎಂ ಜಿ ಹಿರೇಮಠ