ಕರ್ನಾಟಕ

karnataka

ETV Bharat / state

ಮೂರು ತಿಂಗಳ ವೇತನ ಸಿಗದೆ ಸಂಕಷ್ಟದಲ್ಲಿ ಗದಗ ಕೆಎಸ್​ಆರ್​ಟಿಸಿ ವಿಭಾಗದ ಸಿಬ್ಬಂದಿ - ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ

ಕೆಎಸ್​ಆರ್​ಟಿಸಿ ಗದಗ ಜಿಲ್ಲಾ ವಿಭಾಗದ ಸುಮಾರು 100ಕ್ಕೂ ಹೆಚ್ಚು ಜನ ಸಿಬ್ಬಂದಿಗೆ ವೇತನ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಲಾಕ್​ಡೌನ್​​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನೌಕರರು ವೇತನ ಪಾವತಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

no-payment-for-gadag-ksrtc-employees
ಗದಗ ಕೆಎಸ್​ಆರ್​ಟಿಸಿ ವಿಭಾಗ

By

Published : May 26, 2020, 11:32 AM IST

ಗದಗ: ನಗರದ ಕೆಎಸ್​ಆರ್​ಟಿಸಿ ವಿಭಾಗದ ನೌಕರರಿಗೆ ಕಳೆದ 3 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಲಾಕ್​​ಡೌನ್​ ಸಂದರ್ಭ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ಸಂಬಳ ನೀಡದೆ ತೊಂದರೆ ಕೊಡಬಾರದು ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಅಲ್ಲದೆ ಸಿಎಂ ಬಿ.ಎಸ್​.ಯಡಿಯೂರಪ್ಪ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರಿಗೆ ವೇತನ ವಿಳಂಬ ನೀತಿ ಅನುಸರಿಸದಂತೆ ನೋಟಿಸ್​ ನೀಡಿದ್ದರು.

ಮೂರು ತಿಂಗಳ ವೇತನ ಸಿಗದೆ ಸಂಕಷ್ಟದಲ್ಲಿ ಸಿಬ್ಬಂದಿ

ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ಲಾಕ್​​ಡೌನ್​ನಿಂದಾಗಿ ಜೀವನ ನಡೆಸೋದು ಸಹ ಕಷ್ಟವಾಗಿದ್ದು, ಕೂಡಲೇ ವೇತನ ಪಾವತಿಸಬೇಕು ಅಂತ ಗದಗ ಸಾರಿಗೆ ಇಲಾಖೆ ನೌಕರರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಗದಗ ಜಿಲ್ಲೆಯಲ್ಲಿ 7 ಡಿಪೋಗಳಿದ್ದು, ಸುಮಾರು 100ಕ್ಕೂ ಹೆಚ್ಚಿನ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲವಂತೆ. ಲಾಕ್​ಡೌನ್ ಆರಂಭವಾದಾಗಿನಿಂದ ಈವರೆಗೆ ವೇತನವಾಗಿಲ್ಲವೆಂದು ಸಿಬ್ಬಂದಿ ಆರೋಪ ಮಾಡಿದ್ದಾರೆ. ಕೂಡಲೇ ತಮ್ಮ ವೇತನವನ್ನು ಪಾವತಿಸಬೇಕೆಂದು ಚಾಲಕರು, ನಿರ್ವಾಹಕರು ಸಾರಿಗೆ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details