ಗದಗ: ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪ್ರತಿ ಭಾನುವಾರ ವಿಧಿಸಿದ್ದ ಕರ್ಫ್ಯೂವನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
ಭಾನುವಾರದ ಕರ್ಫ್ಯೂ ತೆರವು: ಗದಗದಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ - Gadag latest news
ಭಾನುವಾರದ ಕರ್ಫ್ಯೂ ತೆರವುಗೊಳಿಸದ ಕಾರಣ ಗದಗದಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಜನರು ಅಂಗಡಿಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ಗದಗದಲ್ಲಿ ಸಹಜ ಸ್ಥಿತಿಗೆ ಮರಳಿದ ಜನಜೀವನ
ಜಿಲ್ಲೆಯಲ್ಲಿ ಯಥಾಪ್ರಕಾರ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದೆ. ಇನ್ನು ಸಾರಿಗೆ ಸಂಚಾರಕ್ಕೂ ವಿನಾಯಿತಿ ನೀಡಿದ್ದರಿಂದ ಸರ್ಕಾರಿ, ಖಾಸಗಿ ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯುಂಟಾಗಿಲ್ಲ. ಜನರು ಅಂಗಡಿ ಮುಂಗಟ್ಟುಗಳಿಗೆ ತೆರಳಿ ವ್ಯಾಪಾರ ಮಾಡುವ ದೃಶ್ಯಗಳು ಕಂಡುಬಂದವು.