ಗದಗ:ಇಲ್ಲಿಯೂ ಬೆಡ್‌ಗಳ ಕೊರತೆ ಉಂಟಾಗಿದೆಯಾ ಅನ್ನೋ ಪ್ರಶ್ನೆ ಮೂಡಿದೆ. ಯಾಕೆಂದರೆ ಇಂದು ಗದಗದ ಆಯುಷ್ ಆಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್ನಲ್ಲಿ ಸೋಂಕಿತ ರೋಗಿಗಳು ಬೆಡ್ಗಾಗಿ ಪರದಾಡಿದ ಘಟನೆ ನಡೆದಿದೆ.
ಗದಗದಲ್ಲಿ ಬೆಡ್ ಸಿಗದೇ ಕೊರೊನಾ ರೋಗಿಗಳ ಪರದಾಟ! - ಗದಗ ಕೊರೊನಾ ಸುದ್ದಿ,
ಬೆಡ್ ಸಿಗದೇ ರೋಗಿಗಳು ಪರದಾಡುತ್ತಿರುವ ಘಟನೆ ಗದಗದ ಆಯುಷ್ ಆಸ್ಪತ್ರೆಯಲ್ಲಿ ನಡೆದಿದೆ.
ಸುಮಾರು 70 ವರ್ಷದ ವೃದ್ಧೆಯೊಬ್ಬರಿಗೆ ಬೆಡ್ ಸಿಗದೇ ಪರದಾಡಿದ್ದಾರೆ. ನಿನ್ನೆಯಿಂದ ಪಕ್ಕದ ಜಿಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಬೆಡ್ನಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆಯಿಂದ ತೀವ್ರ ಉಸಿರಾಟದ ತೊಂದರೆ ಅನುಭಿಸುತ್ತಿದ್ದ ವೃದ್ಧೆಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡುವ ಅವಶ್ಯಕತೆ ಇತ್ತು. ಹೀಗಾಗಿ ಕೋವಿಡ್ ಸೆಂಟರ್ಗೆ ವೃದ್ಧೆಯನ್ನ ರೆಫರ್ ಮಾಡಲಾಗಿತ್ತು. ಆದ್ರೆ ಕೋವಿಡ್ ಸೆಂಟರ್ ಸಿಬ್ಬಂದಿ ಅತ್ತಿಂದಿತ್ತ ಅಲೆದಾಡಿಸಿ ಪರದಾಡುವಂತೆ ಮಾಡಿದ್ದಾರೆ ಎನ್ನಲಾಗಿದೆ.
ಸುಮಾರು ಎರಡು ಗಂಟೆಗಳ ಕಾಲ ವೃದ್ಧೆಯನ್ನು ಅಲೆದಾಡಿಸಿದ್ದಾರೆ. ಇದರಿಂದಾಗಿ ಇಲ್ಲಿ ಸರಿಯಾದ ಸಮಯಕ್ಕೆ ಬೆಡ್ ಸಿಗೋದಿಲ್ಲ ಅಂತ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಎಚ್ಚೆತ್ತ ಸಿಬ್ಬಂದಿ ಸೋಂಕಿತ ವೃದ್ಧೆಯನ್ನ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸಿದ್ದಾರೆ.