ಕರ್ನಾಟಕ

karnataka

ETV Bharat / state

ಕೈ ಮುರಿತವಾಗಿ ಇಡೀ ರಾತ್ರಿ ಗೋಳಾಡಿದ ಮಗು: ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ - ಶಿರಹಟ್ಟಿ ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ

ಪುಟ್ಟ ಮಗುವೊಂದು ರಾತ್ರಿಯಿಡೀ ನರಳಾಡಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

neglect-of-gims-hospital-doctors-child-groaned-through-the-night
ಜಿಮ್ಸ್​​​ ಆಸ್ಪತ್ರೆ ಗದಗ

By

Published : Jan 30, 2020, 11:04 AM IST

ಗದಗ:ಪುಟ್ಟ ಮಗುವೊಂದು ರಾತ್ರಿಯಿಡೀ ನರಳಾಡಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದ ಸಾಯಿನ್ ಕೊನಿವಾಳ ಎಂಬ ಮಗು ಕಟ್ಟೆಯ ಮೇಲಿಂದ ಬಿದ್ದು ಕೈ ಮುರಿದುಕೊಂಡಿತ್ತು. ತಕ್ಷಣ ಪೋಷಕರು ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಬಲಗೈನ ತೊಳಿ(ರಟ್ಟೆ)ನ ಭಾಗದಲ್ಲಿ ಮುರಿತವಾದ್ರೆ, ಮುಂಗೈಗೆ ಬ್ಯಾಂಡೇಜ್ ಮಾಡಿ ಜಿಮ್ಸ್​ ಆಸ್ಪತ್ರೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಮಗುವಿನ ನರಳಾಟ

ಇತ್ತ ಜಿಮ್ಸ್ ಆಸ್ಪತ್ರೆಗೆ ಕರೆತಂದರೂ ರಾತ್ರಿ ಪಾಳಿ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ. ಆರ್ಥೊಪೆಡಿಕ್ ವೈದ್ಯರು ಮುಂಜಾನೆ ನೋಡುತ್ತೇನೆ, ಸದ್ಯ ನಿವೇ ಟ್ರೀಟ್​​ಮೆಂಟ್​ ಕೊಡಿ ಎಂದು ನರ್ಸ್‌ಗೆ ಹೇಳಿ ಸುಮ್ಮನಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ರಾತ್ರಿಯಿಡೀ ಮಗು ನರಳಾಡುವಂತಾಗಿದೆ.ಎಕ್ಸ್ ರೇ ರಿಪೋರ್ಟ್‌ ಬಂದ ನಂತರ ವೈದ್ಯರ ಯಡವಟ್ಟು ಬಯಲಾಗಿದೆ.

ABOUT THE AUTHOR

...view details