ಶಾಸಕ: ಸಿ.ಸಿ.ಪಾಟೀಲ್, ಪೂರ್ಣ ಹೆಸರು : ಚಂದ್ರಗೌಡ ಚನ್ನಪ್ಪಗೌಡ ಪಾಟೀಲ್.
ಕ್ಷೇತ್ರ : ನರಗುಂದ
ಜಾತಿ : ಪಂಚಮಸಾಲಿ (ಲಿಂಗಾಯತ)
ಎಷ್ಟು ಬಾರಿ ಗೆದ್ದಿದ್ದಾರೆ: 2004, 2008 ಹಾಗೂ 2018ರಲ್ಲಿ ವಿಧಾನಸಭೆಯ ನರಗುಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ
- ತಮ್ಮ ರಾಜಕೀಯ ಜೀವನವನ್ನು 1995ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಸದಸ್ಯರಾಗೋ ಮೂಲಕ ಆರಂಭ ಮಾಡಿದ್ರು. ಅಲ್ಲದೇ ಆಗ್ಲೇ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
- ನಂತರ 6 ವರ್ಷಗಳ ಕಾಲ ಸವದತ್ತಿಯ ಮಲಪ್ರಭಾ ಕೋ-ಆಪರೇಟಿವ್ ಮಿಲ್ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
- ನವಲಗುಂದದ ರೇಣುಕಾದೇವಿ ಮೆಕ್ಕೆಜೋಳ ಸಂಸ್ಕರಣಾ ಘಟಕದ ಸಂಸ್ಥಾಪಕ ನಿರ್ದೇಶಕರಾಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.
- 2004, 2008 ಹಾಗೂ 2018ರಲ್ಲಿ 3 ಬಾರಿ ವಿಧಾನಸಭೆಯ ನರಗುಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
- 2008ರ ಜುಲೈನಿಂದ 2010 ರ ಸೆಪ್ಟೆಂಬರ್ವರೆಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
- 2008ರ ವಿಧಾನಸಭೆಯಲ್ಲಿ 2010ರ ಸೆಪ್ಟೆಂಬರ್ರಿಂದ 2012ರ ಫೆಬ್ರವರಿವರೆಗೂ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
- 2007 ಫೆಬ್ರವರಿಯಿಂದ 2007 ನವಂಬರ್ವರೆಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವಿದೆ.
- ಜೂನ್ 25 2016 ರಿಂದ ಇಲ್ಲಿಯವರೆಗೆ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸ್ತಿದ್ದಾರೆ.