ಕರ್ನಾಟಕ

karnataka

ETV Bharat / state

ಸ್ವಯಂ ಪ್ರೇರಿತರಾಗಿ ನರಗುಂದ ಪಟ್ಟಣವನ್ನೇ ಬಂದ್ ಮಾಡಿದ ಸ್ಥಳೀಯರು - corona naragunda news

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ತಡವಾಗಿಯಾದರೂ ಅಲ್ಲಿನ ಸ್ಥಳೀಯರು ಸ್ವಯಂ ಪ್ರೇರಿತವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಲಾಕಡೌನ್ ಮಾಡಿದ್ದಾರೆ. ‌ಸ್ವಯಂ ಪ್ರೇರಿತವಾಗಿ ಸ್ಥಳೀಯರು, ಹಾಗೂ ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಯಾವುದೇ ವಾಹನಗಳು ಪಟ್ಟಣದೊಳಕ್ಕೆ ಬರದಂತೆ ಲಾಕ್ ಮಾಡಿಕೊಂಡಿದ್ದಾರೆ.

naragunda
ನರಗುಂದ ಪಟ್ಟಣ

By

Published : Apr 12, 2020, 3:16 PM IST

ನರಗುಂದ (ಗದಗ): ಕೊರೊನಾಗೆ ಜಿಲ್ಲೆಯಲ್ಲಿ ವೃದ್ಧೆ ಬಲಿಯಾದ ಹಿನ್ನೆಲೆ ಜಿಲ್ಲೆಯ ವನರಗುಂದ ಪಟ್ಟಣದ ಜನ ಸ್ವಯಂ ಪ್ರೇರಿತರಾಗಿ ಪಟ್ಟಣದೊಳಗೆ ಯಾವ ವಾಹನ ಬಾರದಂತೆ ಬಂದ್​ ಮಾಡಿದ್ದಾರೆ.

ಲಾಕ್​ಡೌನ್​ ಹಿನ್ನೆಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ‌ ಕೈಗೊಂಡಿದೆ ಆದರೂ ಜನರ ಸಹಕಾರ ಇಲ್ಲದೆ ಯಶಸ್ವಿಯಾಗದು, ಕೆಲವು ಕಡೆ ಲಾಕ್ ಡೌನ್ ಉಲ್ಲಂಘನೆ ಮಾಡಿ ಜನಜಂಗುಳಿ ಸೇರ್ತಿದ್ದಾರೆ.

ನರಗುಂದ ಪಟ್ಟಣ

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ತಡವಾಗಿಯಾದರೂ ಅಲ್ಲಿನ ಸ್ಥಳೀಯರು ಸ್ವಯಂ ಪ್ರೇರಿತವಾಗಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಲಾಕಡೌನ್ ಮಾಡಿದ್ದಾರೆ. ‌ಸ್ವಯಂ ಪ್ರೇರಿತವಾಗಿ ಸ್ಥಳೀಯರು, ಹಾಗೂ ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಯಾವುದೇ ವಾಹನಗಳು ಪಟ್ಟಣದೊಳಕ್ಕೆ ಬರದಂತೆ ಲಾಕ್ ಮಾಡಿಕೊಂಡಿದ್ದಾರೆ.

ವಿನಾಕಾರಣ ಓಡಾಡುವವರಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಜೆಸಿಬಿಗಳ ಮೂಲಕ ರಸ್ತೆಗೆ ಅಡ್ಡಲಾಗಿ ಮುಳ್ಳು, ಪೈಪ್ ಗಳನ್ನ ಇಟ್ಟು ಬಂದ್ ಮಾಡಿದ್ದಾರೆ.

ABOUT THE AUTHOR

...view details