ಗದಗ/ಹುಬ್ಬಳ್ಳಿ: ರಾಜ್ಯಾದ್ಯಂತ 'ನರಗುಂದ ಬಂಡಾಯ' ಚಲನಚಿತ್ರ ಬಿಡುಗಡೆಯಾಗಿದ್ದು, ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದೆ. ಪಟ್ಟಣದ ರೇಣುಕಾ ಚಿತ್ರಮಂದಿರ ದಲ್ಲಿ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರ ವಿಜಯ್ ಕುಲಕರ್ಣಿ, ಹಾಗೂ ಬೈರನಟ್ಟಿ ದೊರೆ ಸ್ವಾಮಿ ಮಠದ ಶಿವ ಶಾಂತವೀರ ಸ್ವಾಮೀಜಿ, ಪತ್ರಿವನಮಠ ಗುರುಸಿದ್ಧ ಶಿವಯೋಗಿ ಸ್ವಾಮೀಜಿಗಳು ಸೇರಿದಂತೆ ಹಲವಾರು ಜನ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರಮಂದಿರದ ಮುಂದೆ ಸಿಹಿ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
'ನರಗುಂದ ಬಂಡಾಯ' ಸಿನಿಮಾ ಬಿಡುಗಡೆ: ಬಂಡಾಯದ ನೆಲದಲ್ಲಿ ಸಂಭ್ರಮ - 'Naragunda bandaya' Cinema celebration in hubli and gadag
ರಾಜ್ಯಾದ್ಯಂತ 'ನರಗುಂದ ಬಂಡಾಯ' ಚಲನಚಿತ್ರ ಬಿಡುಗಡೆಯಾಗಿದ್ದು, ಬಂಡಾಯದ ನೆಲ ಗದಗ ಜಿಲ್ಲೆಯ ನರಗುಂದ ಪಟ್ಟಣ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ.
!['ನರಗುಂದ ಬಂಡಾಯ' ಸಿನಿಮಾ ಬಿಡುಗಡೆ: ಬಂಡಾಯದ ನೆಲದಲ್ಲಿ ಸಂಭ್ರಮ 'Naragunda bandaya' Cinema](https://etvbharatimages.akamaized.net/etvbharat/prod-images/768-512-6385896-thumbnail-3x2-smk.jpg)
ಬಂಡಾಯದ ನೆಲದಲ್ಲಿ ಸಂಭ್ರಮ
ಬಂಡಾಯದ ನೆಲದಲ್ಲಿ ಸಂಭ್ರಮ
ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ಚಲನಚಿತ್ರ ಯಶಸ್ವಿಯಾಗಿ ನೂರು ದಿನ ಪೊರೈಸಲಿ ಎಂದು ಅಭಿಮಾನಿಗಳು ಹಾಗೂ ರೈತ ಮುಖಂಡರು ಶುಭಕೋರಿದರು. ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಇಂದು ಚಿತ್ರ ಬಿಡುಗಡೆಯಾಗಿದ್ದು, ಉತ್ತರ ಕರ್ನಾಟಕ ದ ಎಲ್ಲಾ ಸಾರಿಗೆ ಸಿಬ್ಬಂದಿ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ರೈತ ಮುಖಂಡರು ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರೇಕ್ಷಕರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ರೈತ ಮುಖಂಡ ವಿರೇಶ ಸೊಬರದಮಠ, ಶಿವಾನಂದ ಮುತ್ತಣ್ಣವರ, ಜಗದೀಶ್ ರಿತ್ತಿ ಹಾಗೂ ಗುರುರಾಜ ಹೂಗಾರ ಇದ್ದರು.