ಗದಗ :ರಾತ್ರಿ ಪಾರ್ಟಿ ಮಾಡುತ್ತಿದ್ದ ವೇಳೆ ಇಬ್ಬರು ಯುವಕರು ಓರ್ವನನ್ನು ಕೊಲೆ ಮಾಡಿ, ಹಳ್ಳವೊಂದರಲ್ಲಿ ಮೃತದೇಹವನ್ನು ಮುಚ್ಚಿಟ್ಟಿದ್ದ ಘಟನೆ ಗದಗ್ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ನಡೆದಿದೆ.
ಸಿದ್ದಲಿಂಗಪ್ಪ (52) ಕೊಲೆಯಾದ ವ್ಯಕ್ತಿಯಾಗಿದ್ದು, ಅದೇ ಗ್ರಾಮದ ಮಹಾಂತೇಶ, ಮತ್ತು ಶಿವಕುಮಾರ ಎಂಬ ಯುವಕರು ಆತನನ್ನು ಕೊಲೆ ಮಾಡಿದ್ದಾರೆ. ಕೊತಬಾಳ ಗ್ರಾಮದ ಹೊರ ವಲಯದಲ್ಲಿರುವ ಆರೋಪಿಯ ಜಮೀನಿನಲ್ಲಿ ಮೂವರೂ ಚಿಕನ್ ತಯಾರಿಸಿ, ಮದ್ಯ ಸೇವನೆ ಮಾಡಿದ್ದರು. ಸಿದ್ದಲಿಂಗಪ್ಪ ಕೂಡಾ ಈ ಪಾರ್ಟಿಯಲ್ಲಿ ಭಾಗವಹಿಸಿದ್ದನು.
ತೆಂಗಿನ ಗಿಡ ನೆಡುವಂತೆ ಹೇಳಿದ್ದರು..
ಚಿಕನ್ ತಿಂದು ಮದ್ಯಸೇವನೆ ಮಾಡಿದ ಬಳಿಕ ಮಹಾತೇಂಶ ಸಿದ್ದಲಿಂಗಪ್ಪನಿಗೆ ತಮ್ಮ ಜಮೀನನಲ್ಲಿ ತೆಂಗಿನಗಿಡ ನೆಡುವಂತೆ ಕೇಳಿದ್ದಾನೆ. ಸಿದ್ದಲಿಂಗಪ್ಪ ತೆಂಗಿನ ಗಿಡ ನೆಡುತ್ತಿದ್ದಾಗ ಹಿಂಬದಿಯಿಂದ ಬಂದ ಮಹಾಂತೇಶ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಕೊಲೆ ಮಾಡಿದ ವಿಚಾರ ಯಾರಿಗೂ ಗೊತ್ತಾಗಬಾರದೆಂದು ಭಾವಿಸಿ, ಅಲ್ಲಿಯೇ ಇದ್ದ ಹಳ್ಳವೊಂದರಲ್ಲಿ ಮಣ್ಣನ್ನು ತೆಗೆದು ಮುಚ್ಚಿದ್ದಾರೆ. ನಂತರ ಮುಂಜಾನೆ ತಮಗೇನೂ ಗೊತ್ತಿಲ್ಲ ಎಂಬಂತೆ ನಡವಳಿಕೆ ಪ್ರದರ್ಶಿಸಿದ್ದಾರೆ.