ಕರ್ನಾಟಕ

karnataka

ETV Bharat / state

ಮುಂಡರಗಿ ತಾಲೂಕು ವೈದ್ಯಾಧಿಕಾರಿ ಕೊರೊನಾಗೆ ಬಲಿ - ಗದಗ ಸುದ್ದಿ

ಕೊರೊನಾ ಸೋಂಕು ತಗುಲಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಬಸವರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Mundaragi Taluk Dr. K. Basavaraj Death from corona infection
ಮುಂಡರಗಿ ತಾಲೂಕು ವೈದ್ಯಾಧಿಕಾರಿ ಕೊರೊನಾಗೆ ಬಲಿ

By

Published : Sep 2, 2020, 7:12 PM IST

ಗದಗ:ಕೊರೊನಾ ಸೋಂಕು ತಗುಲಿದ್ದ ಜಿಲ್ಲೆಯ ಮುಂಡರಗಿ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಬಸವರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

43 ವರ್ಷದ ವೈದ್ಯಾಧಿಕಾರಿ ಬಸವರಾಜ್ ಕೊರೊನಾ ವಾರಿಯರ್​ ಆಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಆಗಸ್ಟ್ 21ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೇ ಎಕ್ಮೋ ಚಿಕಿತ್ಸೆಗಾಗಿ ಸರ್ಕಾರದ ನೆರವು ಸಹ ಕೋರಿದ್ದರು. ನಂತರ ಡಾ.ಬಸವರಾಜ್​ ಅವರ ಸಂಪೂರ್ಣ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸುವ ಭರವಸೆ‌ ನೀಡಿತ್ತು.

ಆದರೆ, ವೈದ್ಯಾಧಿಕಾರಿ ಡಾ.ಕೆ.ಬಸವರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆಂದು ಗದಗ ಜಿಲ್ಲಾಧಿಕಾರಿ ಸುಂದರೇಶಬಾಬು ಬಾಬು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details