ಕರ್ನಾಟಕ

karnataka

ETV Bharat / state

ಶೂನ್ಯ ಬಂಡವಾಳ, ಕೈತುಂಬ ಲಕ್ಷಾಂತರ ರೂ. ರೊಕ್ಕ.. ಹುಣಸೆ ಅರಣ್ಯ‌ ಕೃಷಿಯಿಂದ ಮುಂಡರಗಿ ರೈತ ಮಾದರಿ..

2007ರಲ್ಲಿ ಬೈಫ್ ಸಂಸ್ಥೆಯ‌ ಸಹಕಾರದಲ್ಲಿ ತಮ್ಮ ಖುಷ್ಕಿ ಜಮೀನಿನಲ್ಲಿ 30 ಅಡಿಗೆ ಒಂದರಂತೆ ಮಡಿಗಳನ್ನ ನಿರ್ಮಿಸಿದರು. ಕೊಟ್ಟಿಗೆ ಗೊಬ್ಬರ ಹಾಕಿ 210 ಸಸಿಗಳನ್ನ ನೆಟ್ಟಿದ್ದರು. ಒಂದು ವರ್ಷದಲ್ಲಿ ಸುಮಾರು 120 ಸಸಿಗಳು ರೋಗ ಬಾಧೆಯಿಂದ ನಾಶವಾದವು.

Forest farming
ಹುಣಸೆ ಅರಣ್ಯ‌ ಕೃಷಿ ಮಾಡಿ ಮಾದರಿಯಾದ ಮುಂಡರಗಿ ರೈತ

By

Published : Jun 10, 2020, 9:00 PM IST

ಗದಗ :ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ‌ ಗ್ರಾಮದಲ್ಲಿ ಹಿರಿಯ ರೈತನೋರ್ವ ತಮ್ಮ ಹೊಲದಲ್ಲಿ ಹುಣಸೆ ಅರಣ್ಯ‌ ಕೃಷಿ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಅರಣ್ಯ‌ ಕೃಷಿ ಮಾಡಿ ಮಾದರಿಯಾದ ಮುಂಡರಗಿ ರೈತ..

ಗ್ರಾಮದ ತಿಮ್ಮರೆಡ್ಡೆಪ್ಪ ಎಂಬ ರೈತ ತಮ್ಮ 7 ಎಕರೆ 5 ಗುಂಟೆ‌‌ ಜಮೀನಿನಲ್ಲಿ ಸಂಪೂರ್ಣವಾಗಿ ಹುಣಸೆ ಅರಣ್ಯ‌ ಕೃಷಿ ಮಾಡಿದ್ದಾರೆ. ಕಳೆದ 13 ವರ್ಷಗಳ ಹಿಂದೆ ಸಸಿ ನೆಟ್ಟು ಆರೈಕೆ ಮಾಡಿದ್ದರ ಫಲವಾಗಿ ಇಂದು ಲಕ್ಷಾಂತರ ವರಮಾನ ಪಡೆಯುತ್ತಿದ್ದಾರೆ.

2007ರಲ್ಲಿ ಬೈಫ್ ಸಂಸ್ಥೆಯ‌ ಸಹಕಾರದಲ್ಲಿ ತಮ್ಮ ಖುಷ್ಕಿ ಜಮೀನಿನಲ್ಲಿ 30 ಅಡಿಗೆ ಒಂದರಂತೆ ಮಡಿಗಳನ್ನ ನಿರ್ಮಿಸಿದರು. ಕೊಟ್ಟಿಗೆ ಗೊಬ್ಬರ ಹಾಕಿ 210 ಸಸಿಗಳನ್ನ ನೆಟ್ಟಿದ್ದರು. ಒಂದು ವರ್ಷದಲ್ಲಿ ಸುಮಾರು 120 ಸಸಿಗಳು ರೋಗ ಬಾಧೆಯಿಂದ ನಾಶವಾದವು. ಆಗ ಸ್ಥಳೀಯ ಸಾಮಾಜಿಕ‌ ಅರಣ್ಯ ಇಲಾಖೆಯ ಸಹಕಾರದಲ್ಲಿ ‌ ಪುನಾಃ 120 ಸಸಿಗಳನ್ನ ನೆಟ್ಟು ಬೆಳೆಸಿದ್ದಾರೆ. ಪ್ರಾರಂಭದ ಬೇಸಿಗೆ‌ ದಿನಗಳಲ್ಲಿ ಮೂರು ವರ್ಷಗಳವರೆಗೆ ಸಸಿಗಳಿಗೆ‌ ನೀರು ಉಣಿಸಿದ್ದಾರೆ.‌ ಜೊತೆಗೆ ಯಾವುದೇ ರಾಸಾಯನಿಕ ಗೊಬ್ಬರ ಸಹ ಉಪಯೋಗಿಸದೆ ಅರಣ್ಯ ಕೃಷಿ ಮಾಡಿದ್ದಾರೆ.

ನೀರಾವರಿ ಜಮೀನಿನ ರೈತರು ಸಹ ಹುಬ್ಬೇರಿಸುವಂತೆ ಒಣ ಜಮೀನಿನಲ್ಲಿ ಮೇಟಿ ಅವರು ಮಾಡಿದ ಪರಿಸರ ಪೂರಕ ಅರಣ್ಯ ಕೃಷಿಗೆ ಪರಿಸರವಾದಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details