ಗದಗ: ಇಂದು ಸಹ ಮುಂಬೈನಿಂದ ನಗರಕ್ಕೆ ಮುಂಬೈನಿಂದ ರೈಲು ಆಗಮಿಸಿದ್ದು, ಸುಮಾರು 69 ಮಂದಿ ಪ್ರಯಾಣಿಕರನ್ನು ಹೊತ್ತು ತಂದಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡು ರೈಲಿನಲ್ಲಿ ಬಂದವರ ಆರೋಗ್ಯ ತಪಾಸಣೆಗೆ ಎರಡು ಕೌಂಟರ್ ತೆರೆದಿತ್ತು.
ಗದಗಕ್ಕೆ 69 ಜನರನ್ನು ಹೊತ್ತು ತಂದ ಮುಂಬೈ ಟ್ರೈನ್: ಎಲ್ಲರೂ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್
ಮುದ್ರಣ ನಗರಿ ಗದಗಕ್ಕೆ ಮುಂಬೈನಿಂದ ಇಂದು ಸಹ ರೈಲಿನ ಮೂಲಕ 69 ಪ್ರಯಾಣಿಕರು ಆಗಮಿಸಿದ್ದಾರೆ. ಎಲ್ಲರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.
ಈ ಮೊದಲು ರೈಲಿನಲ್ಲಿ ಬರೋದಕ್ಕೆ 103 ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ಮಾಡಿಸಿದ್ದರು. ಆದರೆ ಅದರಲ್ಲಿ 69 ಜನ ಮಾತ್ರ ಆಗಮಿಸಿದ್ದು, ವೈದ್ಯರು ಮತ್ತು ನರ್ಸ್ ಸಿಬ್ಬಂದಿ ಪ್ರಯಾಣಿಕರ ಆಧಾರ್ ಕಾರ್ಡ್ ಪರಿಶೀಲಿಸಿ ಸ್ಕ್ರೀನಿಂಗ್ ಟೆಸ್ಟ್ ಮಾಡಿದ್ದಾರೆ. ಜೊತೆಗೆ ಈ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ರೈಲು ನಿಲ್ದಾಣದಲ್ಲಿ ಬೀಡುಬಿಟ್ಟಿದೆ. ಡಿವೈಎಸ್ಪಿ ಪ್ರಹ್ಲಾದ್, ಸಿಪಿಐ ಬಿ. ಎ ಬಿರಾದಾರ್ ನೇತೃತ್ವದಲ್ಲಿ 25 ಪೊಲೀಸ್ ಸಿಬ್ಬಂದಿ ಮತ್ತು 17 ಜನ ರೈಲ್ವೆ ಪೊಲೀಸ್, 10 ಜನ RPF ಪೊಲೀಸರಿಂದ ಭದ್ರತೆ ನೀಡಲಾಗಿದೆ.
ರೈಲ್ವೆ ನಿಲ್ದಾಣದಲ್ಲಿ ನಿಯೋಜನೆಗೊಂಡ ಸಿಬ್ಬಂದಿಗೆಲ್ಲಾ ಮೊದಲೇ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಫೇಸ್ ಶೀಲ್ಡ್ ವಿತರಿಸಲಾಗಿದೆ. ಮುಂಬೈ ನಿಂದ ಬಂದ ಎಲ್ಲಾ ಪ್ರಯಾಣಿಕರನ್ನು ಮೊದಲೇ ನಿಯೋಜಿನಗೊಂಡಿದ್ದ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನ ಇರಿಸಲಾಗುತ್ತದೆ.