ಗದಗ : ತಾಯಿಯೊಬ್ಬಳು ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಟಿವಿ ಕೊಡಿಸಿದ್ದ ಸುದ್ದಿಯನ್ನು ಈಟಿವಿ ಭಾರತ ಪ್ರಸಾರ ಮಾಡಿದ ಹಿನ್ನೆಲೆ ಬಡ ಕುಟುಂಬಕ್ಕೆ ನೆರವಿನ ಮಹಾಪೂರ ಹರಿದು ಬರುತ್ತಿದೆ.
ಈಟಿವಿ ಭಾರತ ಇಂಪ್ಯಾಕ್ಟ್.. ತಾಳಿ ಅಡವಿಟ್ಟ ತಾಯಿಗೆ ಸಹಾಯ ಹಸ್ತ - ಮಕ್ಕಳಿಗಾಗಿ ತಾಳಿ ಮಾರಿದ ತಾಯಿ
ಮಕ್ಕಳ ಶಿಕ್ಷಣದ ಕುರಿತು ಕಾಳಜಿ ತೋರಿ ತಾಳಿಯನ್ನೇ ಮಾರಿ ಟಿವಿ ತಂದು ಶಿಕ್ಷಣದ ಪ್ರಾಮುಖ್ಯತೆ ತೋರಿದ್ದ ಮಹಾತಾಯಿಯೊಬ್ಬರ ಕುರಿತು 'ಈಟಿವಿ ಭಾರತ' ಪ್ರಸಾರ ಮಾಡಿದ್ದ ವರದಿಗೆ ಸ್ಪಂದಿಸಿರುವ ನಾಡಿನ ಜನ ಬಡ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ..
ನಿನ್ನೆ ಈಟಿವಿ ಭಾರತ 'ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ' ಎಂಬ ತಲೆಬರಹದಲ್ಲಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರು ಗ್ರಾಮದ ಕಸ್ತೂರಿ ಎಂಬ ಮಹಿಳೆ ತನ್ನ ಮಕ್ಕಳ ಶಿಕ್ಷಣಕ್ಕಾಗಿ ತಾಳಿ ಮಾರಿ ಟಿವಿ ತಂದು ಶಿಕ್ಷಣ ಪ್ರಾಮುಖ್ಯತೆ ಎತ್ತಿತೋರಿದ ವರದಿಯನ್ನು ಪ್ರಸಾರ ಮಾಡಿತ್ತು. ಅದರ ಹಿನ್ನೆಲೆ ಹಲವಾರು ಜನರು ಕುಟುಂಬದ ನೆರವಿಗೆ ಮುಂದಾಗಿದ್ದಾರೆ. ಸದ್ಯ ತಾಯಿ ಅಡವಿಟ್ಟ ತಾಳಿಯನ್ನು ಬಿಡಿಸಿಕೊಂಡಿದ್ದಾರೆ.
ನಾಡಿನ ವಿವಿಧೆಡೆಯಿಂದ ನೆರವಿನ ಹಸ್ತ ಹರಿದು ಬರುತ್ತಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸೇರಿ ಇತರ ದಾನಿಗಳು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಸದ್ಯ ಮಕ್ಕಳು ಸೇರಿದಂತೆ ತಾಯಿ ಕಸ್ತೂರಿಯವರು ಈಟಿವಿ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.