ಕರ್ನಾಟಕ

karnataka

ETV Bharat / state

ಮದುವೆ ನಿಶ್ಚಯವಾಗಿದ್ದ ಯುವಕನೊಂದಿಗೆ ನೇಣಿಗೆ ಶರಣಾದ ಮೂರು ಮಕ್ಕಳ ತಾಯಿ - ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮ

ಮದುವೆಯಾಗಿ ಮೂರು ಮಕ್ಕಳಿರುವ ಮಹಿಳೆ ಹಾಗೂ ವಿವಾಹ ನಿಶ್ಚಯವಾಗಿದ್ದ ಯುವಕನೋರ್ವ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ನೇಣಿಗೆ ಶರಣಾದ ನಾಲ್ಕು ಮಕ್ಕಳ ತಾಯಿ

By

Published : Nov 15, 2019, 10:36 AM IST

Updated : Nov 15, 2019, 12:07 PM IST

ಗದಗ: ಪ್ರೇಮಿಗಳಿಬ್ಬರು ಒಂದೇ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ರೋಣ ಸಾರಿಗೆ ಡಿಪೋದಲ್ಲಿ‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರಗೌಡ(35) ಹಾಗೂ ಅದೇ ಗ್ರಾಮದ ಮಹಿಳೆ ನೇಣಿಗೆ ಶರಣಾದವರು. ಇವರಲ್ಲಿ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆಂದು ತಿಳಿದುಬಂದಿದೆ.

ಯುವಕನೊಂದಿಗೆ ನೇಣಿಗೆ ಶರಣಾದ ನಾಲ್ಕು ಮಕ್ಕಳ ತಾಯಿ

ಇನ್ನು, ಶಂಕರಗೌಡನಿಗೆ ಮುಂದಿನ 15 ದಿನಗಳಲ್ಲಿ ಮದುವೆ ನಿಗದಿಯಾಗಿತ್ತೆಂದು ಹೇಳಲಾಗ್ತಿದೆ. ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.

Last Updated : Nov 15, 2019, 12:07 PM IST

ABOUT THE AUTHOR

...view details