ಗದಗ:ಅತ್ತೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿ ಬಚಾವ್ ಆದ ಅತ್ತೆ ಶಾಂತಕ್ಕ ನಗರದ ಮಸಾರಿ ಕಾಲೋನಿ ನಿವಾಸಿ ಶಾಂತಕ್ಕ ಹಿರೇಮಠ (70) ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ. ನಿನ್ನೆ ರಾತ್ರಿ ಶಾಂತಕ್ಕ ಭೀಷ್ಮ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಕೆರೆಯ ಆವರಣದಲ್ಲಿರುವ ಬಸವೇಶ್ವರ ಮೂರ್ತಿ ಗಾರ್ಡನ್ ಸಿಬ್ಬಂದಿ ಮತ್ತು ಬೋಟಿಂಗ್ ಸಿಬ್ಬಂದಿ ಕೆರೆಯಲ್ಲಿ ಮುಳುಗುತ್ತಿದ್ದ ವೃದ್ಧೆಯನ್ನು ರಕ್ಷಿಸಿದ್ದಾರೆ.
ವೃದ್ಧೆ ಸದ್ಯ ಹಿರಿಯ ಸೊಸೆ ವಿಜಯಲಕ್ಷ್ಮಿ ಎಂಬುವವರ ಬಳಿ ವಾಸವಾಗಿದ್ದಾರೆ. ನನ್ನ ಸೊಸೆ ನಿರಂತರವಾಗಿ ಕಿರುಕುಳ ನೀಡಿದ್ದಾಳೆ. ಸರಿಯಾಗಿ ಊಟ ಕೊಡೋದಿಲ್ಲ. ನನಗೆ ಬಾಯಿಗೆ ಬಂದಂತೆ ಬೈತಾಳೆ, ಕೆಟ್ಟ ಬೈಗಳದಿಂದ ನನ್ನ ಜರೀತಾಳೆ ಎಂದು ವೃದ್ಧೆ ದೂರಿದ್ದಾರೆ.
ವಿಷಯ ತಿಳಿದು ನಗರದ ಮಹಿಳಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆಕೆಯನ್ನು ರಕ್ಷಣೆ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವಿಳಾಸ ತಿಳಿದುಕೊಂಡು ಮಗ ಮತ್ತು ಸೊಸೆಗೆ ಬೆಳಗ್ಗೆ ಠಾಣೆಗೆ ಬರಬೇಕೆಂದು ತಿಳಿಸಿದ್ದಾರೆ.
ಆದರೆ ಪೊಲೀಸ್ ಠಾಣೆಗೆ ಬಂದರೂ ಅತ್ತೆ ಸೊಸೆಯ ಜಗಳ ನಿಂತಿರಲಿಲ್ಲ. ಒಬ್ಬರಿಗೊಬ್ಬರು ಒಂದೊಂದು ಕಾರಣ ನೀಡಿ ಆರೋಪ ಪ್ರತ್ಯಾರೋಪದಲ್ಲಿಯೇ ತೊಡಗಿದ್ದರು. ಆದರೆ ಈ ಬಗ್ಗೆ ಮಗ ಮತ್ತು ಸೊಸೆಯನ್ನು ಕೇಳಿದರೆ ವೃದ್ಧೆಯ ಮೇಲೆ ಆರೋಪ ಮಾಡ್ತಿದ್ದಾರೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಆಕೆಯದ್ದೇ ತಪ್ಪಿದೆ ಎಂದು ವಾದಿಸುತ್ತಿದ್ದರು.
ವೃದ್ಧೆಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗ ಸೊಸೆ ಮೊಮ್ಮಕ್ಕಳು ಅಜ್ಜಿಯ ಸ್ವಂತ ಮನೆಯಲ್ಲಿದ್ದರೆ ಇನ್ನೊಬ್ಬ ಮಗ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೊಂದು ಮನೆಯಲ್ಲಿ ಬಾಡಿಗೆ ನೆಲೆಸಿದ್ದಾನೆ. ಇನ್ನೊಬ್ಬ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ.
ಇದನ್ನೂ ಓದಿ: 'ಮುಂದಿನ ವರ್ಷ ರಾಜ್ಯೋತ್ಸವ ಪ್ರಶಸ್ತಿ ಮೌಲ್ಯ 1 ರಿಂದ 5 ಲಕ್ಷಕ್ಕೇರಿಕೆ, ಪ್ರಶಸ್ತಿಗೆ ಅರ್ಜಿ ಹಾಕುವ ಅಗತ್ಯವಿಲ್ಲ'