ಗದಗ: ಎರಡು ವರ್ಷದ ಮಗುವಿನ ಮೇಲೆ ಮಂಗವೊಂದು ದಾಳಿ ನಡೆಸಿದ ಘಟನೆ ನಗರದ ಕೆ.ಸಿ.ರಾಣಿ ಬಡಾವಣೆಯಲ್ಲಿ ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಆದ್ಯಾ ಮೇಲೆ ಕೋತಿ ಏಕಾಏಕಿ ದಾಳಿ ಮಾಡಿ ತಲೆ, ಬೆನ್ನಿಗೆ ಗಾಯಗೊಳಿಸಿದೆ. ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಳೆದ 15 ದಿನಗಳಿಂದ ಕೋತಿ ಹಾವಳಿ ಹೆಚ್ಚಾಗಿದ್ದು, ನಾಲ್ವರ ಮೇಲೆ ದಾಳಿ ಮಾಡಿವೆ.ಮನೆಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.