ಗದಗ:ಬೇಸಿಗೆಯ ತಾಪ ತಾಳಲಾರದೇ ಕುಟುಂಬಸ್ಥರು ಮನೆ ಟೆರೇಸ್ ಮೇಲೆ ಮಲಗಿದ್ದ ವೇಳೆ ಖದೀಮರು ಮನೆಯಲ್ಲಿದ್ದ ಹಣ, ಒಡವೆ, ಬೈಕ್ ಕದ್ದು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಬೇಸಿಗೆಯ ತಾಪಕ್ಕೆ ಮನೆಯವರು ಮನೆ ಮಾಳಿಗೆ ಮೇಲೆ... ಕಳ್ಳರು ಮನೆಯೊಳಗೆ..! - gadag news
ಬೇಸಿಗೆಯ ತಾಪ ತಾಳಲಾರದೇ ಕುಟುಂಬಸ್ಥರು ಮನೆ ಟೆರೇಸ್ ಮೇಲೆ ಮಲಗಿದ್ದ ವೇಳೆ ಖದೀಮರು ಮನೆಯಲ್ಲಿದ್ದ ಹಣ, ಒಡವೆ, ಬೈಕ್ ಕದ್ದು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ವಿನಾಯಕ ನಗರದ ಕೆಎಸ್ಆರ್ಟಿಸಿ ಬಸ್ ಚಾಲಕ ಮಹಾಂತೇಶಗೌಡ ಎಂಬುವರು ರಾತ್ರಿ ಡ್ಯೂಟಿ ಮುಗಿಸಿಕೊಂಡು ಬಂದ ನಂತರ ಬೇಸಿಗೆ ತಾಪಕ್ಕೆ ಕುಟುಂಬದವರೆಲ್ಲರೂ ಮನೆಯ ಟೆರೇಸ್ ಮೇಲೆ ಮಲಗಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ ಖದೀಮರು, ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ 35 ಗ್ರಾಂ ಮಾಂಗಲ್ಯ ಸರ, 10 ಗ್ರಾಂ ಚಿನ್ನದ ಸರ, 5 ಗ್ರಾಂ ಕಿವಿ ಓಲೆ, 25 ಗ್ರಾಂ ಬೆಳ್ಳಿ ಕಾಲುಂಗುರ, 30 ಸಾವಿರ ನಗದು ಸೇರಿ ಬೈಕನ್ನು ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ನರಗುಂದ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.