ಗದಗ: ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು. ಅವರು ಸಮಾಜ ತಿದ್ದುವ, ಸಂಸ್ಕೃತಿ ಬಿತ್ತುವ ಕೆಲಸ ಮಾಡಬೇಕು. ಜಾತ್ಯಾತೀತ ರಾಷ್ಟ್ರ ಎಂದು ಹೇಳುವ ನಾವೆಲ್ಲ, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ಇಬ್ಭಾಗಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಅವರು ವಚನಾನಂದ ಸ್ವಾಮೀಜಿಗೆ ಕುಟುಕಿದ್ದಾರೆ.
ಸ್ವಾಮೀಜಿಗಳಿಗೆ ರಾಜಕೀಯ ಯಾಕೆ ಬೇಕು: ಹೊರಟ್ಟಿ - ಎಂಎಲ್ಸಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ
ವಚನಾನಂದ ಸ್ವಾಮೀಜಿ ಯಾವ ವೇದಿಕೆಯಲ್ಲಿ ಏನು ಹೇಳಬೇಕು ಎಂಬುದನ್ನು ಚರ್ಚಿಸಿ ಮಾತಾಡಿದ್ರೆ ಒಳ್ಳೆಯದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿಗೆ ತಿಳುವಳಿಕೆ ಕಡಿಮೆ ಇದೆ. ಚಿಕ್ಕ ವಯಸ್ಸು, ಮುಂದಿನ ದಿನಗಳಲ್ಲಿ ಯಾವ ವೇದಿಕೆಗಳಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಲಿಂಗಾಯತರಿಗೂ ಶೇಕಡಾ 16ರಷ್ಟು ಮೀಸಲಾತಿ ನೀಡುವ ಕುರಿತು ಸಿಎಂ ಬಳಿ ಚರ್ಚಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಲಿಂಗಾಯತರಿಗೆ ನೀಡಲಾಗುವ ಮೀಸಲಾತಿಯನ್ನು ವಿವರಿಸಿರುವುದಾಗಿ ತಿಳಿಸಿದರು.
Last Updated : Jan 17, 2020, 4:45 AM IST