ಕರ್ನಾಟಕ

karnataka

ಆಸ್ತಿ ಬರೆದು ಕೊಡುವಂತೆ ಧಮ್ಕಿ: ಶಾಸಕರ ವಿರುದ್ಧ ದಂಪತಿ ಆರೋಪ

By

Published : Jun 17, 2022, 2:22 PM IST

Updated : Jun 17, 2022, 2:59 PM IST

ಬಾಗಲಕೋಟೆಯ ಬೀಳೀರು ಗುರುಬಸವ ಪತ್ತಿನ ಸಹಕಾರಿ ಬ್ಯಾಂಕ್​ನಲ್ಲಿ ಸಾಲ ಮಾಡಿದ್ದ ದಂಪತಿ ಮರುಪಾವತಿ ಮಾಡಲು ಹೋದಾಗ ಅವರನ್ನು ಕರೆಸಿ, ಸಾಲ ಮರುಪಾವತಿ ಮಾಡುವುದು ಬೇಡ, ಆಸ್ತಿಯನ್ನು ಬರೆದುಕೊಡು ಎಂದು ಎಂಎಲ್ಎಯೊಬ್ಬರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

An assaulted couple
ಹಲ್ಲೆಗೊಳಗಾದ ದಂಪತಿ

ಗದಗ : ಬಾಗಲಕೋಟೆ ಶಾಸಕರೊಬ್ಬರು ದಂಪತಿ ಮೇಲೆ ಗೂಂಡಾಗಿರಿ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಆಸ್ತಿ ಬರೆದುಕೊಡುವಂತೆ ಧಮ್ಕಿ ಹಾಕಿ ದಂಪತಿಗೆ ಹಿಗ್ಗಾಮುಗ್ಗ ಥಳಿಸಿ ಜೀವ ಬೆದರಿಕೆ ನೀಡಿರುವ ಆರೋಪ ಕೇಳಿ ಬಂದಿದೆ. ಗದಗ ತಾಲೂಕಿನ ಅಡವಿ ಸೋಮಾಪುರ ನಿವಾಸಿ ಮಲ್ಲಯ್ಯ ಹಿರೇಮಠ ಮತ್ತು ಲಕ್ಷ್ಮಿ ಹಿರೇಮಠ ಎಂಬುವರನ್ನು ಬಾಗಲಕೋಟೆಯಲ್ಲಿನ ತಮ್ಮ ಗೆಸ್ಟ್ ಹೌಸ್​ಗೆ ಕರೆಸಿ ಬೆಲ್ಟ್​ನಿಂದ ಮತ್ತು ಕಬ್ಬಿಣದ ಪೈಪ್​​ಗಳಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಬೆಂಬಲಿಗರ ಸಮ್ಮುಖದಲ್ಲೇ ಮಹಿಳೆ ಮೇಲೆ ಖುರ್ಚಿ ಎತ್ತಿ ಹಾಕಿ ಹಲ್ಲೆ‌ ಮಾಡಿದ್ದಲ್ಲದೇ ಕಿವಿ, ಕೈ, ತೊಡೆಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿದ್ದಾರಂತೆ. ಮಹಿಳೆ ಅಂತಾನೂ ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಸ್ತಿ ಬರೆದು ಕೊಡದಿದ್ದರೆ ಉಳಿಸೋದಿಲ್ಲ ಎಂದು ಬೆದರಿಕೆ ಹಾಕಿದ್ದಾರಂತೆ.

ಹಲ್ಲೆಗೊಳಗಾದ ದಂಪತಿ ಮಾಧ್ಯಮದೊಂದಿಗೆ ಮಾತನಾಡಿದರು.

ಅಂದಹಾಗೆ ಈ ದಂಪತಿಗೆ ಬಾಗಲಕೋಟೆಯ ನವನಗರದಲ್ಲಿ 20 ಗುಂಟೆ ಜಾಗ ಇದ್ದು, ಸದ್ಯ ಇದು ಮೂರು ಕೋಟಿ ರೂ.ಗೂ ಅಧಿಕ ಬೆಲೆ ಬಾಳುತ್ತೆ. ಹೀಗಾಗಿ ಕೋಟ್ಯಂತರ ರೂ. ಬೆಲೆ ಬಾಳೋ ಜಾಗದ ಮೇಲೆ ಎಂಎಲ್​ಎ ಕಣ್ಣುಬಿದ್ದಿದೆ. ಆದರೆ ಬಾಗಲಕೋಟೆಯ ಬೀಳೂರು ಗುರುಬಸವ ಪತ್ತಿನ ಸಹಕಾರಿ ಬ್ಯಾಂಕ್​ನಲ್ಲಿ ದಂಪತಿ ಸಾಲ ಮಾಡಿದ್ದರು. 60 ಲಕ್ಷ ಸಾಲ ಮಾಡಿದ್ದ ಹಿರೇಮಠ ದಂಪತಿ, ಸಾಲ ಮರುಪಾವತಿ ಮಾಡೋದು ತಡವಾಗಿತ್ತು.

ಸಾಲ ಮರುಪಾವತಿ ಮಾಡಲು ಹೋಗಿದ್ದ ದಂಪತಿಯನ್ನು ಕರೆಸಿ ಹಲ್ಲೆ ಮಾಡಿದ್ದಾರಂತೆ. ಸಾಲ ತುಂಬುವುದು ಬೇಡ ನಿಮ್ಮ ಹೆಸರಲ್ಲಿರುವ ಆಸ್ತಿಯನ್ನು ಬರೆದುಕೊಡು ಇಲ್ಲದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಈ ಸಂಬಂಧ ಬಾಗಲಕೋಟೆ ನವನಗರ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ನೀವು ಆದಷ್ಟು ಬೇಗ ಊರಿಗೆ ಹೋಗಿ ದೂರುಗೀರು ಬಿಟ್ಟು ಸುಮ್ಮನೆ ಮನೆಗೆ ಹೋಗಿ, ಇಲ್ಲದಿದ್ದರೆ ಅವರು ನಿಮ್ಮನ್ನು ಉಳಿಸುವುದಿಲ್ಲ ಎಂದು ಪೊಲೀಸರು ಸಹ ನಮ್ಮನ್ನು ಹೆದರಿಸಿ ಕಳುಹಿಸಿದರು ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.

ಇದನ್ನೂ ಓದಿ :ಅತ್ಯಾಚಾರ ಮಾಡಿ, ₹2 ಕೋಟಿ ಹಣವನ್ನೂ ಪಡೆದು ದಾವುದ್‌ ಹೆಸರಲ್ಲಿ ಬೆದರಿಸಿದ 75ರ ಹರೆಯದ ಉದ್ಯಮಿ!

Last Updated : Jun 17, 2022, 2:59 PM IST

ABOUT THE AUTHOR

...view details