ಕರ್ನಾಟಕ

karnataka

ETV Bharat / state

ಕೋವಿಡ್​ ನಿಯಂತ್ರಣ ಕ್ರಮಗಳು ಅವೈಜ್ಞಾನಿಕ: ಸಿಎಂಗೆ ಶಾಸಕ ಹೆಚ್.ಕೆ.ಪಾಟೀಲ್ ಪತ್ರ - ಸಿಎಂಗೆ ಶಾಸಕ ಹೆಚ್.ಕೆ.ಪಾಟೀಲ್ ಪತ್ರ

ಕೊರೊನಾ ಎರಡನೇ ಅಲೆ ನಿಯಂತ್ರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಗಳು ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ದೂರಿದ್ದಾರೆ.

MLA HK Patil
ಶಾಸಕ ಹೆಚ್.ಕೆ.ಪಾಟೀಲ್

By

Published : Apr 14, 2021, 2:00 PM IST

ಗದಗ:ಕೊರೊನಾ ನಿಯಂತ್ರಣದ ವಿಷಯವಾಗಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ಶಾಸಕ ಹೆಚ್.ಕೆ.ಪಾಟೀಲ್ ಟೀಕಿಸಿದ್ದಾರೆ.

ಹೆಚ್.ಕೆ.ಪಾಟೀಲ್ ಪತ್ರ

ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದ ಪಾಟೀಲ್ ರಾಜ್ಯಕ್ಕೆ ಕೊರೊನಾ ಕಾಲಿಟ್ಟು 14 ತಿಂಗಳು ಕಳೆದಿವೆ. ಹಲವಾರು ಸಮಸ್ಯೆಗಳು, ಸಾವು-ನೋವುಗಳನ್ನು ಎದುರಿಸಿದ್ದೇವೆ. ಇದರಿಂದ ಸಾಕಷ್ಟು ಅನುಭವ ಹೊಂದಿದ್ದೇವೆ ಅನ್ನೋ ಭಾವನೆಯಿದೆ.‌ ಆದರೂ ಕೂಡ ಕೋವಿಡ್‌ ನಿಯಂತ್ರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಗಳು ಸೂಕ್ತವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಣದ ಕೊರತೆ ಹೆಸರಿನಲ್ಲಿ ರಕ್ಷಣೆ ಪಡೆಯುತ್ತಿದ್ದ ಸರ್ಕಾರ ಸಾಕಷ್ಟು ಅನುಭವ ಹೊಂದಿದ್ದರೂ, ನಿಷ್ಕ್ರೀಯವಾಗಿ ಕೊರೊನಾ ಹರಡುವಿಕೆ ಮತ್ತು ನಿಯಂತ್ರಣಕ್ಕೆ ನಗೆಪಾಟಲಿನ ಕ್ರಮ ಕೈಗೊಂಡು ಜನರನ್ನು ಮತ್ತೆ ಸಂಕಷ್ಟಕ್ಕೆ ದೂಡಿದೆ. ನೈಟ್ ಕರ್ಫ್ಯೂದಿಂದ ಯಾವ ಪುರುಷಾರ್ಥ ಸಾಧನೆಯಾಗದು ಎಂದಿದ್ದಾರೆ.

ಲಸಿಕಾ ಕಾರ್ಯಕ್ರಮ ನಿಸ್ತೇಜಗೊಂಡಿದೆ. ಲಸಿಕೆ ಹಾಕಿಸಿಕೊಳ್ಳುವುದರ ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸಿಲ್ಲ. ಲಸಿಕೆ ಹಾಕಿಸಿಕೊಂಡವರಿಗೆ ಮತ್ತೆ ಸೋಂಕು ತಗುಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸೋಂಕಿತರಿಗೆ ಬಯಲಲ್ಲಿ ಚಿಕಿತ್ಸೆ ನೀಡಲು ಜನ ಏನು ಜಾನವಾರುವಲ್ಲ.. ಶಾಸಕ ಹೆಚ್ ಕೆ ಪಾಟೀಲ್

ABOUT THE AUTHOR

...view details