ಗದಗ : ಕೊರೋನಾ ವೈರಸ್ ಭೀತಿ ಹಿನ್ನೆಲೆ ನಗರದ ಜಿಮ್ಸ್ ಆಸ್ಪತ್ರೆಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿತರಿಗೆ ಸಿದ್ದವಾಗಿರುವ ಪ್ರತ್ಯೇಕ ವಾರ್ಡ್ ವೀಕ್ಷಣೆಮಾಡಿ, ವೈರಸ್ ಬಗ್ಗೆ ಜನಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.
ಕೊರೊನಾ ವೈರಸ್ ಭೀತಿ : ಜಿಮ್ಸ್ ಆಸ್ಪತ್ರೆಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ.. - ಗದಗ ಎಚ್.ಕೆ.ಪಾಟೀಲ್ ಸುದ್ದಿ
ಕೊರೋನಾ ವೈರಸ್ ಭೀತಿ ಹಿನ್ನೆಲೆ ನಗರದ ಜಿಮ್ಸ್ ಆಸ್ಪತ್ರೆಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿತರಿಗೆ ಸಿದ್ದವಾಗಿರುವ ಪ್ರತ್ಯೇಕ ವಾರ್ಡ್ ವೀಕ್ಷಣೆಮಾಡಿ, ವೈರಸ್ ಬಗ್ಗೆ ಜನಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ಜಿಮ್ಸ್ ಆಸ್ಪತ್ರೆ ಗೆ ಶಾಸಕ ಎಚ್.ಕೆ.ಪಾಟೀಲ್ ಭೇಟಿ
ನಂತರ ಮಾತನಾಡಿದ ಅವರು, ನಮ್ಮ ಗದಗ ಭಾಗದಲ್ಲಿ ಈವರೆಗೂ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ನಮ್ಮ ದೇಶದಲ್ಲಿ ಕೊರೋನಾ ತಡೆಗಟ್ಟುವಂತೆ ಏನೇನು ಕ್ರಮಗಳಿವೆ ಅವುಗಳಿಗೆ ಎಲ್ಲರೂ ಕೈಜೋಡಿಸೋಣ, ಆ ಮೂಲಕ ಮೂಲಕ ವೈರಸ್‌ನಿಂದ ದೂರವಿರೋಣ ಎಂದರು.
ಜಿಮ್ಸ್ ಆಸ್ಪತ್ರೆ ಗೆ ಶಾಸಕ ಹೆಚ್ ಕೆ ಪಾಟೀಲ್ ಭೇಟಿ..
ಬಜೆಟ್‌ನಲ್ಲಿ ಕೊರೊನಾ ವೈರಸ್ ತಡೆಯಲು ಮುಂಜಾಗೃತ ಕ್ರಮ ಕೈಗೊಳ್ಳುವ ಬಗ್ಗೆ ವಿಶೇಷ ಕಾರ್ಯಕ್ರಮ ಘೋಷಣೆ ಮಾಡಬೇಕಿತ್ತು. ಈಗಾಗಲೇ ಬಜೆಟ್ ಸಮಯ ಮುಗಿದು ಹೋಗಿದೆ. ಸರ್ಕಾರ ಕೊರೊನಾ ಬಗ್ಗೆ ಏನೇನು ಕಾರ್ಯಕ್ರಮಗಳನ್ನ ರೂಪಿಸುತ್ತಾರೆ ಎಂಬುದರ ಬಗ್ಗೆ ವಿಶೇಷ ಹೇಳಿಕೆಯನ್ನ ಸಿಎಂ ಸದನದಲ್ಲಾದರೂ ಹೇಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.