ಗದಗ:ಇತ್ತೀಚೆಗೆ ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗೋ ಕನಸು ಕಾಣ್ತಿದಾರೆ: ಸಚಿವ ಶ್ರೀರಾಮುಲು - ನೆರೆಪರಿಹಾರದ ಬಗ್ಗೆ ಶ್ರೀರಾಮುಲು ಹೇಳಿಕೆ
ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಆರೋಗ್ಯ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಗದಗದಲ್ಲಿ ಮಾತಾನಾಡಿದ ಅವರು, ಬೈ ಎಲೆಕ್ಷನ್ ಬಳಿಕ ಸರ್ಕಾರ ಬೀಳುತ್ತದೆ ಎಂಬ ಪ್ರತಿಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಇತ್ತೀಚೆಗೆ ಕೆಲ ನಾಯಕರು ಗಿಣಿ ಶಾಸ್ತ್ರ, ಪಂಚಾಂಗ ಹೇಳೋ ಕೆಲಸ ಮಾಡ್ತಿದ್ದಾರೆ. ಸರ್ಕಾರ ಬೀಳುತ್ತೋ ಬಿಡುತ್ತೋ ಅನ್ನೋದು ಗಿಣಿ ಶಾಸ್ತ್ರ ಹೇಳುವವರ ಕೈಲಿಲ್ಲ ಅಂತ ಟಾಂಗ್ ಕೊಟ್ರು.
ಇನ್ನು ನೆರೆ ಪರಿಹಾರ ಕುರಿತು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುವ ರಾಜಕಾರಣಿಗಳಿಗೆ ನಾವು ಏನು ಮಾಡೋಕಾಗಲ್ಲ. ಹೀಗಾಗಿ ಸರ್ಕಾರದ ಬಗ್ಗೆ ನೆಗೆಟಿವ್ ಮಾತನಾಡಬೇಕು, ಮಾತನಾಡ್ತಾರೆ, ಮಾತಾಡಲಿ ಬಿಡಿ ಎಂದ್ರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗೋ ಕನಸು ಕಾಣುತ್ತಿದ್ದಾರೆ ಅಂತ ಅವರ ಕಾಲೆಳೆದ್ರು. ಇದೇ ವೇಳೆ ಉಪ ಚುನಾವಣೆಯಲ್ಲಿ ನಾವು 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ. ಅನರ್ಹರಿಗೆ ಟಿಕೆಟ್ ಕೊಡೋ ವಿಚಾರ ಪಕ್ಷದ ಹಿರಿಯರಿಗೆ ಬಿಟ್ಟಿದ್ದು ಎಂದರು.