ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸಾಧಕ-ಬಾಧಕ ಚರ್ಚೆ ಮಾಡಿ ಶೀಘ್ರ ನಿರ್ಧಾರ: ಸಚಿವ ಶ್ರೀರಾಮುಲು - ಸಾರಿಗೆ ನೌಕರರ ಬೇಡಿಕೆ

ಸಾರಿಗೆ ನೌಕರರ ಮುಷ್ಕರ ವೇಳೆ ನೌಕರರ ವರ್ಗಾವಣೆ ಮತ್ತು ಅಮಾನತು ಮಾಡಲಾಗಿತ್ತು. ಅವರ ಸಮಸ್ಯೆ ಇತ್ಯರ್ಥ ಸಂಬಂಧ ಈಗಾಗಲೇ ಹೋರಾಟಗಾರರ‌ ಜತೆ ಚರ್ಚೆ ಮಾಡಿದ್ದೇನೆ. ಜೊತೆಗೆ ಸಾರಿಗೆ ಇಲಾಖೆ ಇವತ್ತು ನಷ್ಟದ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನ ಮೊದಲು ಲಾಭದಾಯಕ ಸಂಸ್ಥೆಯನ್ನಾಗಿ ಮಾಡಬೇಕಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸಚಿವ ಶ್ರೀರಾಮುಲು
ಸಚಿವ ಶ್ರೀರಾಮುಲು

By

Published : Aug 28, 2021, 10:11 PM IST

Updated : Aug 28, 2021, 10:35 PM IST

ಗದಗ: ಶೀಘ್ರದಲ್ಲೇ ಸಾರಿಗೆ ನೌಕರರ ಸಮಸ್ಯೆಗಳಿಗೆ ಒಂದು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನೌಕರರ ಮುಷ್ಕರ ವೇಳೆ ನೌಕರರ ವರ್ಗಾವಣೆ ಮತ್ತು ಅಮಾನತು ಮಾಡಲಾಗಿತ್ತು. ಅವರ ಸಮಸ್ಯೆ ಇತ್ಯರ್ಥ ಸಂಬಂಧ ಈಗಾಗಲೇ ಹೋರಾಟಗಾರರ‌ ಜತೆ ಚರ್ಚೆ ಮಾಡಿದ್ದೇನೆ. ಸಾಧಕ ಬಾಧಕ ಚರ್ಚೆ ಮಾಡಿ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸ

ಸಚಿವ ಶ್ರೀರಾಮುಲು

ಜೊತೆಗೆ ಸಾರಿಗೆ ಇಲಾಖೆ ಇವತ್ತು ನಷ್ಟದ ಸಂಸ್ಥೆಯಾಗಿದೆ. ಈ ಸಂಸ್ಥೆಯನ್ನ ಮೊದಲು ಲಾಭದಾಯಕ ಸಂಸ್ಥೆಯನ್ನಾಗಿ ಮಾಡಬೇಕಿದೆ. ಲಾಭದಾಯಕ ಸಂಸ್ಥೆ ಮಾಡಬೇಕಾದ್ರೆ ಏನು ಮಾಡಬೇಕು ಅನ್ನೋ ಚರ್ಚೆ ನಡೆದಿದೆ ಎಂದರು.

ಬಳಿಕ ಬಸ್ ಡಿಪೋ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿಭಾಗೀಯ ನಿಯಂತ್ರಣಾಧಿಕಾರಿಯ ಕಚೇರಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಎಂಎಲ್​ಸಿ ಎಸ್.ವಿ.ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಕೆಎಸ್ಆರ್​ಟಿಸಿ ಡಿಸಿ ಎಫ್.ಎಸ್.ಹಿರೇಮಠ, ಸಾರಿಗೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.

ಓದಿ:ಕೋವಿಡ್​ನಿಂದ ಗುಣಮುಖರಾಗಿದ್ದೀರಾ?....ದಿಢೀರ್ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದರೆ ಎಚ್ಚರ!

Last Updated : Aug 28, 2021, 10:35 PM IST

ABOUT THE AUTHOR

...view details