ಗದಗ:ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಎಂ ಆಗೋದು ಹಗಲು ಕನಸು. ಒಂದು ಕಡೆ ಸಿದ್ದರಾಮಯ್ಯ ಮತ್ತೊಂದ್ಕಡೆ ಡಿಕೆಶಿ ನಾನೇ ಸಿಎಂ ಅಂತಿದಾರೆ. ಈ ರಾಜ್ಯಕ್ಕೆ ಎಷ್ಟು ಜನ ಸಿಎಂ ಅನ್ನೋದು ನನಗೆ ತಿಳಿಯುತ್ತಿಲ್ಲಾ ಅಂತಾ ಸಚಿವ ಸಿಸಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಆಡಳಿತ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಮುಂದಿನ ಸಿಎಂ ಅಂತಿದಾರೆ, ಮುಂದಿನ ಸಿಎಂ ಕ್ಯಾಂಪೇನ್ಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕು ಅಂದರೆ 113 ಸೀಟ್ ಬೇಕು. ಬಳಿಕ ಶಾಸಕಾಂಗ ಸಭೆಯಲ್ಲಿ ಸಿಎಂ ನಿರ್ಧಾರ ಮಾಡ್ತಾರೆ.
ನಮ್ಮಲ್ಲಿ ಶಾಸಕರು ಮುಖ್ಯಮಂತ್ರಿಯನ್ನ ಆರಿಸುತ್ತೇವೆ. ಕಾಂಗ್ರೆಸ್ನಲ್ಲಿ ದೆಹಲಿಯಿಂದ ಚೀಟಿ ಯಾರ ಪರವಾಗಿ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲಾ. ಇಬ್ಬರ ಹೊರತುಪಡಿಸಿ ಬೇರೆಯವರಿಗೆ ಬಂದರೇ ಏನಾಗುತ್ತೆ. ಹೇಳಿಕೆ ನೀಡುವುದಕ್ಕೆ ಏನು. ಹಣವಂತೂ ಖರ್ಚು ಆಗುವುದಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.