ಗದಗ: 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮದ ವೇಳೆ ಕೃಷಿ ಸಚಿವರ ಫೋಟೋ ಶೂಟ್ ಜೋರಾಗಿತ್ತು.
'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮ: ಹೊಲ-ಗದ್ದೆಗಳಲ್ಲಿ ಕೃಷಿ ಸಚಿವರ ಭರ್ಜರಿ Photoshoot - ಕೃಷಿ ಸಚಿವರ ಭರ್ಜರಿ ಫೋಟೋ ಶೂಟ್ ಸುದ್ದಿ
ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ 'ರೈತರೊಂದಿಗೆ ಒಂದು ದಿನ' ಕಾರ್ಯಕ್ರಮದ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಫೋಟೋ ಶೂಟ್ ಭರ್ಜರಿಯಾಗಿತ್ತು.

ಕೃಷಿ ಸಚಿವರ ಭರ್ಜರಿ ಫೋಟೋ ಶೂ
ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಕೃಷಿ ಸಚಿವರ ಕಾರ್ಯಕ್ರಮವಿತ್ತು. ಕಾರ್ಯಕ್ರಮದ ಉದ್ದಕ್ಕೂ ಬೆಂಗಳೂರಿಂದ ಬಂದಿದ್ದ 10 ಜನ ಫೋಟೋಗ್ರಾಫರ್ಗಳ ತಂಡ ಸಚಿವ ಬಿ.ಸಿ.ಪಾಟೀಲ ಅವರ ಫೋಟೋ ಶೂಟ್ ನಡೆಸಿದರು. ಹೋಗೋ ದಾರಿಯಲ್ಲಿ, ಹೊಲ ಗದ್ದೆಗಳಲ್ಲಿ ಸಚಿವರನ್ನು ನಿಲ್ಲಿಸಿ ಡ್ರೋನ್, ಗಿಂಬಲ್, DSLR ಕ್ಯಾಮರಾ ಬಳಿಸಿ ಫೋಟೋ ಶೂಟ್ ನಡೆಸಿದರು.
ಇದನ್ನೂ ಓದಿ:ಕೊಡಗು ಟಿಪ್ಪು ಜಯಂತಿ ಗಲಭೆಗೆ ನಾಳೆಗೆ 6 ವರ್ಷ: ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್