ಗದಗ: ಬಿಜೆಪಿಯವರನ್ನ ಜನ ಬೀದಿಲಿ ಅಟ್ಟಾಡಿಸಿ ಹೊಡಿತಾರೆ ಅಂತಾ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಬೆನ್ನಲ್ಲೇ ಗದಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್-ಸಿದ್ದರಾಮಯ್ಯಗೆ ಇನ್ನೂ ಬುದ್ಧಿ ಬಂದಿಲ್ಲ: ಈಶ್ವರಪ್ಪ ವಾಗ್ದಾಳಿ - Ishwarappa gadag visits latest news
ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಗದಗದಲ್ಲಿ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
![ಕಾಂಗ್ರೆಸ್-ಸಿದ್ದರಾಮಯ್ಯಗೆ ಇನ್ನೂ ಬುದ್ಧಿ ಬಂದಿಲ್ಲ: ಈಶ್ವರಪ್ಪ ವಾಗ್ದಾಳಿ gadag](https://etvbharatimages.akamaized.net/etvbharat/prod-images/768-512-5307292-thumbnail-3x2-surya.jpg)
ಗದಗದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹೋದಲ್ಲೆಲ್ಲಾ ಹೀಗೆ ಮಾತಾಡಿ ಮಾತಾಡಿ ಜನ ಅವರನ್ನು ಈಗಾಗಲೇ ಹೊಡೆದು ಹೊರಗೆ ಹಾಕಿದ್ದಾರೆ. ದನ ಕೊಲ್ಲುವುದನ್ನು ತಡೆಯೋಕೆ ಅಡ್ಡ ಹೋದವ್ರನ್ನು ಕೊಲೆ ಮಾಡಿಸಿದ್ರು. ಕೊಲೆಗಡುಕರಿಗೆ ನ್ಯಾಯ ಒದಗಿಸುವ ಮೂಲಕ ಹಿಂದೂಗಳನ್ನ ಕಗ್ಗೊಲೆ ಮಾಡಿದ್ರು. ಎಪ್ಪತ್ತೆಂಟು ಇದ್ದದ್ದನ್ನ ಇಪ್ಪತ್ತೆಂಟು ಮಾಡಿದ್ರು. ಸಿದ್ದರಾಮಯ್ಯನವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಮುಸ್ಲಿಂರು ನಮ್ಮ ಜೊತೆಯಲಿಲ್ಲ ಅಂತಾ ಹೇಳ್ತಾರೆ. ಇಲ್ಲ ಅನ್ನೋದಾಗಿದ್ರೆ ಅಯೋಧ್ಯೆಯ ತೀರ್ಪು ಬಂದ ಬಳಿಕ ನಮ್ಮ ವಿರುದ್ಧ ಬೇಜಾರಾಗದೇ ರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡ್ತಿದ್ದಾರೆ. ಇವರು ಹೀಗೆ ಮುಸ್ಲಿಂರನ್ನ ನಮ್ಮ ವಿರುದ್ಧ ಎತ್ತಿಕಟ್ಟೋಕೆ ಹೋಗಿ ಇನ್ಮೇಲೆ ಆ ವೋಟುಗಳನ್ನ ಕಳ್ಕೊತಾರೆ ಎಂದು ವಾಗ್ದಾಳಿ ನಡೆಸಿದ್ರು.
ಯಡಿಯೂರಪ್ಪ ಸಿಎಂ ಆಗಿಯೇ ಇರ್ತಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಒಂದೆರೆಡು ಸೀಟು ಬರೋದೇ ಹೆಚ್ಚು ಅಂತಾ ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ್ರು.