ಗದಗ: ಕೆಲಸ ಅರಸಿ ದೂರದ ಗೋವಾಕ್ಕೆ ಹೋಗಿದ್ದ ಗದಗದ ಕಾರ್ಮಿಕರು ಲಾಕ್ಡೌನ್ನಿಂದಾಗಿ ಅಲ್ಲಿಯೇ ಉಳಿದಿದ್ದಾರೆ. ಅವರಿಗೆ 10 ದಿನಗಳಿಗಾಗುವಷ್ಟು ತರಕಾರಿ, ದಿನಸಿಯನ್ನು ವಾಹನದ ಮೂಲಕ ಸಚಿವ ಸಿ.ಸಿ.ಪಾಟೀಲ್ ಕಳುಹಿಸಿ ಕೊಟ್ಟಿದ್ದಾರೆ.
ಗೋವಾದಲ್ಲಿರುವ ಗದಗದ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ್ - ಗೋವಾದಲ್ಲಿ ಸಿಲುಕಿದ ಗದಗ ಕಾರ್ಮಿಕರು
ಉದ್ಯೋಗಕ್ಕಾಗಿ ಗೋವಾಕ್ಕೆ ಹೋಗಿದ್ದ ಗದಗದ ಸುಮಾರು 800 ಕಾರ್ಮಿಕರಿಗೆ ಸಚಿವ ಸಿ.ಸಿ.ಪಾಟೀಲ್ 10 ದಿನಗಳಿಗೆ ಆಗುವಷ್ಟು ದಿನಸಿ, ತರಕಾರಿಯನ್ನು ವಾಹನದ ಮೂಲಕ ಕಳುಹಿಸಿ ಕೊಟ್ಟಿದ್ದಾರೆ. 800 ಕಿಟ್ಗಳನ್ನು ಸಿದ್ಧಪಡಿಸಿ ಕಳುಹಿಸಲಾಗಿದೆ.
ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ್
ಕಾರ್ಮಿಕರು ಗೋವಾದ ಪಣಜಿ ಮತ್ತು ಮಡಗಾಂವ್ನಲ್ಲಿದ್ದಾರೆ. ಅವರೆಲ್ಲಾ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 800 ಕಾರ್ಮಿಕರಾಗಿದ್ದಾರೆ.
ದಿನಸಿ ಕಿಟ್ನಲ್ಲಿ ಏನಿದೆ: 5 ಕೆಜಿ ಅಕ್ಕಿ, ತಲಾ 1 ಕೆಜಿ ರವಾ, ತೊಗರಿ ಬೇಳೆ, ಹೆಸರುಕಾಳು, ಆಲೂಗಡ್ಡೆ, ಈರುಳ್ಳಿ, 1 ಲೀಟರ್ ಅಡುಗೆ ಎಣ್ಣೆ ಜೊತೆಗೆ ಸಕ್ಕರೆ, ಚಹಾ ಪುಡಿ, ಉಪ್ಪು, ಸಾಸಿವೆ, ಜೀರಿಗೆ, ಅರಿಷಿಣ, ಖಾರದ ಪುಡಿ, ಮಸಲಾ ಪುಡಿ ಮತ್ತು ಬೆಳ್ಳುಳ್ಳಿ ಹಾಗೂ ಸ್ನಾನ, ಬಟ್ಟೆ ಸಾಬೂನುಗಳನ್ನು ಕಳುಹಿಸಿದ್ದಾರೆ.