ಗದಗ: ವಿಜಯನಗರ ಜಿಲ್ಲೆ ರಚನೆ ಬಗ್ಗೆ ಮಾಹಿತಿಯಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕುರಿತು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಬಿಜೆಪಿಯಲ್ಲಿ ಕೆಲ ಲಿಂಗಾಯತ ನಾಯಕರನ್ನು ಮುಗಿಸುವ ಷಡ್ಯಂತ್ರದ ವಿಚಾರವಾಗಿ ಮಾತನಾಡಿದ ಅವರು, ಆರ್.ಬಿ.ತಿಮ್ಮಾಪುರ ಅವರು ಬೀದಿಗೆ ಬಿದ್ದಿರೋ ತಮ್ಮ ಪಕ್ಷದ ಒಳಜಗಳದ ಬಗ್ಗೆ ವಿಚಾರ ಮಾಡಲಿ. ಆಮೇಲೆ ಅವರಿಗೆ ಟೈಂ ಸಿಕ್ರೆ ನಮ್ಮ ಪಕ್ಷದ ಬಗ್ಗೆ ಚಿಂತಿಸಲಿ ಎಂದು ಟಾಂಗ್ ನೀಡಿದರು.
ಆರ್.ಬಿ.ತಿಮ್ಮಾಪುರ ತಮ್ಮ ಪಕ್ಷದ ಒಳಜಗಳದ ಕಡೆ ಗಮನ ನೀಡಲಿ: ಸಿ ಸಿ ಪಾಟೀಲ್ ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ರಾಷ್ಟ್ರೀಯ ಪಕ್ಷವಾಗಿದ್ದು, ನಾಯಕತ್ವ ಬಹಳ ಪ್ರಬಲವಾಗಿದೆ. ರಾಷ್ಟ್ರೀಯ ನಾಯಕರ ಮಾರ್ಗದರ್ಶನದ ಮೇರೆಗೆ ರಾಜ್ಯ ಘಟಕ ಕೆಲಸ ಮಾಡುತ್ತೆ. ಯುಡಿಯೂರಪ್ಪ ಇನ್ನುಳಿದ ಮೂರುವರೆ ವರ್ಷ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅನಿಲ್ ಲಾಡ್ ಬಿಜೆಪಿ ಸೇರ್ಪಡೆ ವಿಚಾರ :
ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು, ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ ರಾಜ್ಯ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.