ಕರ್ನಾಟಕ

karnataka

ETV Bharat / state

ಮುಂಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರುವುದು ಅನಿವಾರ್ಯ.. ಸಚಿವ ಸಿ ಸಿ ಪಾಟೀಲ - Gadag news

ನಾಳೆ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ಮುಂಬೈನಿಂದ ಬಂದವರನ್ನು 7 ದಿನ ಕ್ವಾರಂಟೈನ್ ಮಾಡಲಾಗುತ್ತೆ.

ಸಿ.ಸಿ.ಪಾಟೀಲ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ)

By

Published : Jun 1, 2020, 4:37 PM IST

Updated : Jun 1, 2020, 5:34 PM IST

ಗದಗ: ನಮ್ಮ ರಾಜ್ಯದ ಜನ ದುಡಿಯಲು ಹೋಗಿ ಮುಂಬೈ ನಗರದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮುಂಬೈನಲ್ಲಿರುವ ಕನ್ನಡಿಗರನ್ನು ಕರೆಯಿಸಿಕೊಳ್ಳಬೇಕಿರೋದುಅನಿವಾರ್ಯ ಅಂತಾ ಸಚಿವ ಸಿ ಸಿ ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ್‌ ಭವನದಲ್ಲಿ ಮಾತನಾಡಿದ ಅವರು, ಎಷ್ಟು ಜನ ಮುಂಬೈನಿಂದ ಬರುತ್ತಾರೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಬಂದಿಲ್ಲ. ನಾಳೆ ಬೆಳಗ್ಗೆ 11 ಗಂಟೆ ನಂತರ ಗದಗ ನಿಲ್ದಾಣಕ್ಕೆ ಮುಂಬೈ ರೈಲು ಬರಲಿದೆ. ಗದಗ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಿ ಮುಂಬೈನಿಂದ ಬಂದವರನ್ನು 7 ದಿನ ಕ್ವಾರಂಟೈನ್ ಮಾಡಲಾಗುತ್ತೆ ಎಂದರು.

ಮುಂಬೈನಿಂದ ಗದಗ ಜಿಲ್ಲೆಗೆ ನಿರೀಕ್ಷೆ ಮೀರಿ‌ ಜನ ಬಂದರೂ ಕ್ವಾರಂಟೈನ್ ಮಾಡುತ್ತೇವೆ. ಪ್ರಯಾಣಿಕರಿಗೆ ಯಾವುದೇ ಅನಾನುಕೂಲಗಳು ಆಗದಂತೆ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಗದಗ ಜಿಲ್ಲಾ ಕೇಂದ್ರದಲ್ಲಿ‌ ಕ್ವಾರಂಟೈನ್ ಸಾಲದಿದ್ರೆ ತಾಲೂಕು ಕೇಂದ್ರಗಳಿಗೂ ಕಳುಹಿಸುತ್ತೇವೆ ಎಂದರು.

Last Updated : Jun 1, 2020, 5:34 PM IST

ABOUT THE AUTHOR

...view details